ETV Bharat / state

14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಇನ್ನಿಲ್ಲ.. - ಪತ್ರಿಕಾ ಪ್ರಕಟಣೆ

ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರುತ್ತಿದ್ದ ಬಲರಾಮ ಆನೆ ಅನಾರೋಗ್ಯದಿಂದ ಸಾವನ್ನಪ್ಪಿದೆ.

mysuru-balarama-died-due-to-illness
14 ಬಾರಿ ಚಿನ್ನದ ಅಂಬಾರಿ ಹೊತ್ತ ಬಲರಾಮ ಆನೆ ಸಾವು
author img

By

Published : May 7, 2023, 9:42 PM IST

Updated : May 7, 2023, 11:01 PM IST

ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ನಿರ್ಮಿಸಿದ್ದ 67 ವರ್ಷದ ಬಲರಾಮ ಆನೆ ಭಾನುವಾರ ಸಂಜೆ ಅನಾರೋಗ್ಯದಿಂದ ಸಾವನ್ನಪ್ಪಿದೆ.

ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ಅರಣ್ಯ ವ್ಯಾಪ್ತಿಯ ಹನಗೂಡು ಬಳಿಯ ಭೀಮನಕಟ್ಟೆ ಬಳಿಯ ಅರಣ್ಯ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು, ಹಲವು ದಿನಗಳಿಂದ ಆಹಾರ ನೀರನ್ನು ಸೇವಿಸಿದರೂ ವಾಂತಿ ಮಾಡುತ್ತಿರುವುದಾಗಿ ಕಾವಾಡಿ ತಿಳಿಸಿದ ಮೇರೆಗೆ ಪಶುವೈದ್ಯಾಧಿಕಾರಿಗಳು ಬಲರಾಮನನ್ನು ಪರೀಶಿಲಿಸಿದಾಗ ಒಣಗಿದ ಮರದ ಚೂಪಾದ ಕವಟೆ ಸಿಕ್ಕಿದ್ದು, ಚಿಕಿತ್ಸೆಯನ್ನು ನೀಡಲಾಗಿತ್ತು,

ಚಿಕಿತ್ಸೆಯ ನಂತರವು ಸುಧಾರಿಸಿದ ಕಾರಣ ಎಂಡೋಸ್ಕೋಪಿಯನ್ನು ಮಾಡಿ ಮಾದರಿಯನ್ನು ಪ್ರಯೋಗ ಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಿದ ನಂತರ ಬಲರಾಮನಿಗೆ ಕ್ಷಯಾ ರೋಗ ಇರುವುದಾಗಿ ವೈದ್ಯಾಧಿಕಾರರಿಗಳು ತಿಳಿಸಿದರು. ನಂತರ ಚಿಕಿತ್ಸೆಯನ್ನು ಮುಂದುವರೆಸಿದ್ದು ಆನೆಯು ಯಾವುದೇ ಆಹಾರ, ನೀರು ಸೇವಿಸದೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಮೃತಪಟ್ಟಿದೆ.

ಸೋಮವಾರ ಬೆಳಗ್ಗೆ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಣಸೂರು ವನ್ಯಜೀವಿ ವಲಯದ ಭೀಮನ ಕಟ್ಟೆ ಆನೆ ಕ್ಯಾಂಪ್​ ಬಳಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಮತ್ತು ಬಲರಾಮನ ಅಂತ್ಯಕ್ರಿಯೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಮೈಸೂರು ಅರಮನೆ ವತಿಯಿಂದ ಪುರೋಹಿತರು ಹಾಗೂ ರಾಜ ವಂಶಸ್ಥರಾದಂತಹ ಶೃತಿಕೀರ್ತಿದೇವಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಲರಾಮ ಆನೆಯನ್ನು ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ 1987ರಲ್ಲಿ ಸೆರೆ ಹಿಡಿಯಲಾಗಿತ್ತು.

  • ನಾಡ ಹಬ್ಬ ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ವಿರಾಜಮಾನವಾಗಿ ಪಾಲ್ಗೊಳ್ಳುತ್ತಿದ್ದ ಆನೆ ಬಲರಾಮ ಮೃತಪಟ್ಟಿದ್ದು ಅತ್ಯಂತ ದುಃಖ ತಂದಿದೆ. ಮೃತ ಗಜರಾಜನ ಆತ್ಮಕ್ಕೆ ಸದ್ಗತಿ ಸಿಗಲಿಯೆಂದು ಪ್ರಾರ್ಥಿಸುತ್ತೇನೆ.
    ಓಂ ಶಾಂತಿಃ. pic.twitter.com/FTDgk0o5J1

    — Basavaraj S Bommai (@BSBommai) May 7, 2023 " class="align-text-top noRightClick twitterSection" data=" ">

ಕಂಬನಿ ಮಿಡಿದ ಸಿಎಂ ಬಸವರಾಜ ಬೊಮ್ಮಾಯಿ: ಬಲರಾಮ ಅಸುನೀಗದ ಸುದ್ದಿಯನ್ನು ತಿಳಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್​ ಮಾಡಿ ''ನಾಡ ಹಬ್ಬ ದಸರಾ ಮಹೋತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ವಿರಾಜಮಾನವಾಗಿ ಪಾಲ್ಗೊಳ್ಳುತ್ತಿದ್ದ ಆನೆ ಬಲರಾಮ ಮೃತಪಟ್ಟಿದ್ದು ಅತ್ಯಂತ ದುಃಖ ತಂದಿದೆ. ಮೃತ ಗಜರಾಜನ ಆತ್ಮಕ್ಕೆ ಸದ್ಗತಿ ಸಿಗಲಿಯೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಆರ್ ಅಶೋಕ್ ಪರ ಸಿಎಂ ಬೊಮ್ಮಾಯಿ ಪ್ರಚಾರ

Last Updated : May 7, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.