ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಇನ್ನೆರಡು ದಿನಗಳು ಬಾಕಿ ಇದ್ದು, ಮೈಸೂರು ವಾರಿಯರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.
ನಗರದ ಖಾಸಗಿ ಹೋಟೆಲ್ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ ಅವರು ತಂಡದ ಆಟಗಾರರನ್ನು ಪರಿಚಯಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ ಚೆಕ್ ಅನ್ನು ತಹಸೀಲ್ದಾರ್ ಜಾನ್ಸನ್ ಅವರಿಗೆ ಹಸ್ತಾಂತರ ಮಾಡಲಾಯಿತು.
ಮೈಸೂರು ವಾರಿಯರ್ಸ್ ತಂಡ:
ಅಮಿತ್ ವರ್ಮಾ( ನಾಯಕ), ಜೆ.ಸಚಿತ್, ಅನಿರುದ್ಧ್ ಜೋಶಿ, ಶೋಯೆಬ್ ಮ್ಯಾನೇಜರ್, ವಿಶಾಕ್ ವಿಜಯ್ ಕುಮಾರ್, ಕೆ.ವಿ.ಸಿದ್ಧಾರ್ಥ್, ಡೇಗಾ ನಿಶ್ಚಲ್, ಮಂಜೇಶ್ ರೆಡ್ಡಿ, ಕುಶಾಲ್ ವಾಧ್ಚಾನಿ, ಎಂ.ವೆಂಕಟೇಶ್, ವಿನಯ್ ಎನ್.ಸಾಗರ್, ಕಿಶನ್ ಬೆದಾರೆ, ರಾಮ್ ಸಾರಿಬ್ ಯಾದವ್, ಕೆ.ಎಸ್.ದೇವಯ್ಯ, ಜಯೇಶ್ ಬಾಬು, ಬಿ.ಯು.ಶಿವಕುಮಾರ್, ಸಂಕಲ್ಪ ಶೆಟ್ಟೆಣ್ಣವರ್, ಸೌರಭ್ ಯಾದವ್, ಎಲ್.ಆರ್.ಚೇತನ್, ಉತ್ತಮ್ ಅಯ್ಯಪ್ಪ.