ETV Bharat / state

ಮೈಸೂರು ವಿವಿಯಲ್ಲಿ ಅರ್ಧದಷ್ಟು ಬೋಧಕ ಹುದ್ದೆಗಳು ಖಾಲಿ: ಕುಲಪತಿ ಮಾಹಿತಿ

ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರು ಮುಖ್ಯ. ಹೀಗಾಗಿ, 664 ಹುದ್ದೆಗಳ ಪೈಕಿ 303 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಉಳಿದವುಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಮೈಸೂರು ವಿವಿಯ ಕುಲಪತಿ ಪ್ರೊ.ಹೇಮಂತ್ ಕುಮಾರ್ ಹೇಳಿದರು.

Mysore vv chancellor Hemanth kumar
ಮೈಸೂರು ವಿವಿಯ ಕುಲಪತಿ ಪ್ರೊ.ಹೇಮಂತ್ ಕುಮಾರ್
author img

By

Published : Nov 9, 2020, 3:06 PM IST

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಸುಮಾರು 13 ವರ್ಷಗಳಿಂದ ಬೋಧಕ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಪ್ರಸ್ತುತ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

ವಿವಿಯಲ್ಲಿ 2007ರ ನಂತರ ಯಾವುದೇ ಶಾಶ್ವತ ಬೋಧಕ ಹುದ್ದೆಗಳಿಗೆ ನೇಮಕ ನಡೆದಿಲ್ಲ. ಅದಕ್ಕೆ ಬದಲಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಕೋವಿಡ್​ಗೂ ಮುನ್ನ ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶಿಸಿತ್ತು.

ಅದರಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ 54 ಹುದ್ದೆಗಳು, ಹಿಂದುಳಿದ ವರ್ಗದ 76, ಜನರಲ್ 150 ಸೇರಿ 280 ಹುದ್ದೆಗಳನ್ನು ನೇಮಕಕ್ಕೆ ಅನುಮತಿ ಕೊಟ್ಟಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ತಾತ್ಕಾಲಿಕವಾಗಿ ತಡೆದಿದ್ದೇವೆ ಎಂದರು.

ಮೈಸೂರು ವಿವಿಯ ಕುಲಪತಿ ಪ್ರೊ.ಹೇಮಂತ್ ಕುಮಾರ್

ವಿವಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರು ಮುಖ್ಯ. ಸದ್ಯ 664 ಹುದ್ದೆಗಳ ಪೈಕಿ 303 ಮಾತ್ರ ಭರ್ತಿಯಾಗಿದ್ದು, ಅರ್ಧಕ್ಕಿಂತಲೂ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಹೇಮಂತ್ ಕುಮಾರ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.