ETV Bharat / state

ಮೈಸೂರು ವಿವಿ ಕೆ- ಸೆಟ್ ಫಲಿತಾಂಶ ಪ್ರಕಟ.. 5,495 ಅಭ್ಯರ್ಥಿಗಳು ಪಾಸ್ - ಮೈಸೂರು ವಿವಿ ನಡೆಸಿದ ಕೆ- ಸೆಟ್ ಫಲಿತಾಂಶ ಪ್ರಕಟಿಸಿದ ಕುಲಪತಿ

ಕಳೆದ ಸೆಪ್ಟೆಂಬರ್​​​ನಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಮೈಸೂರು ವಿವಿ ನಡೆಸಿದ ಕೆ- ಸೆಟ್ ಫಲಿತಾಂಶ ಪ್ರಕಟಿಸಿದ ಕುಲಪತಿ
Mysore VV Chancellor Prof. G. Hemanth Kumar Announced K-Cet result
author img

By

Published : Jan 8, 2021, 2:57 PM IST

Updated : Jan 8, 2021, 3:21 PM IST

ಮೈಸೂರು: ಕಳೆದ ಸೆಪ್ಟೆಂಬರ್​​​ನಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯ ಫಲಿತಾಂಶದ ಕುರಿತು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾಹಿತಿ ನೀಡಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸುದ್ದಿಗೋಷ್ಠಿ

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ವಿವಿ ನಡೆಸಿದ ಕೆ-ಸೆಟ್ ಪರೀಕ್ಷೆಯ ಫಲಿತಂಶ ಪ್ರಕಟವಾಗಿದ್ದು, ಈ ಬಾರಿ ಪುರುಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸ್ ಆಗಿದ್ದಾರೆ ಎಂದರು.

ಪರೀಕ್ಷೆಯಲ್ಲಿ 5,495 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 3,113 ಪುರುಷ ವಿದ್ಯಾರ್ಥಿಗಳಿದ್ದರೆ, 2,382 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿದ್ದಾರೆ.

ಪರೀಕ್ಷೆಗೆ ಸುಮಾರು 1,06,396 ಆಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 79,717 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಯುಜಿಸಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿತ್ತು ಎಂದರು.

ಓದಿ: ವಂಚನೆ ಆರೋಪಿ ಯುವರಾಜ್ ನನ್ನನ್ನೊಮ್ಮೆ ಭೇಟಿಯಾಗಿದ್ದ: ಡಿಸಿಎಂ ಲಕ್ಷ್ಮಣ ಸವದಿ

ಡಿಗ್ರಿ ತರಗತಿ ಪ್ರಾರಂಭಕ್ಕೆ ಸಿದ್ಧತೆ:

ಯುಜಿ ಅಂಡ್ ಪಿಜಿ ಪ್ರಥಮ‌ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಜ.19 ನಂತರ ಕಾಲೇಜು ಆರಂಭ ಮಾಡುವ ಚಿಂತನೆ ಮಾಡಲಾಗಿದೆ. ಮಾರ್ಚ್​ನಲ್ಲಿ ಪರೀಕ್ಷೆ ನಡೆಸಲು ವಿವಿ ಚಿಂತನೆ ಮಾಡಿಕೊಂಡಿದೆ ಎಂದರು.

ಸರ್ಕಾರದ ಎಸ್ಓಪಿ ಮಾರ್ಗಸೂಚಿಯಂತೆ ಕಾಲೇಜು ಆರಂಭಿಸಲು ಸೂಚನೆ ನೀಡಿದ್ದಾರೆ. ಯುಜಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾಲೇಜಿನ ಪ್ರಾಂಶುಪಾಲರ ಸಭೆ ನಡೆಸಿ ಚರ್ಚೆ ಮಾಡಲಾಗುವುದು. ಈಗಾಗಲೇ ಆನ್​​ಲೈನ್ ಮೂಲಕ ತರಗತಿಗಳು ನಡೆದಿವೆ. ಉಳಿದ ಪಠ್ಯಗಳು, ಅನುಮಾನಗಳನ್ನು ಆಫ್​​ಲೈನ್ ತರಗತಿಯಲ್ಲಿ ವಿದ್ಯಾರ್ಥಿಗಳು ಬಗೆಹರಿಸಿಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಶಿವಪ್ಪ, ಕೆ-ಸೆಟ್ ಸಂಯೋಜಕ ಪ್ರೊ. ಎಚ್. ರಾಜಶೇಖರ್ ಉಪಸ್ಥಿತರಿದ್ದರು.

Last Updated : Jan 8, 2021, 3:21 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.