ETV Bharat / state

ಅನ್​​ ಲಾಕ್​​​​ ನಂತರ ಮೈಸೂರಿನಲ್ಲಿ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮ

ಕೊರೊನಾದಿಂದ ಕುಂಟಿತ ಕಂಡಿದ್ದ ಮೈಸೂರು ಪ್ರವಾಸೋದ್ಯಮ ಇದೀಗ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಆದರೂ ಕೂಡ ಇಲ್ಲಿಗೆ ಬರುತ್ತಿದ್ದ ಅಂತರಾಷ್ಟ್ರೀಯ ಪ್ರವಾಸಿಗಳು ಬರುತ್ತಿಲ್ಲ.

author img

By

Published : Sep 27, 2020, 6:15 PM IST

Mysore tourism recovery after lockdown
ಲಾಕ್ ಡೌನ್ ನಂತರ ಮೈಸೂರಿನಲ್ಲಿ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮ

ಮೈಸೂರು : ಕೊರೊನಾ ಲಾಕ್​ಡೌನ್​ನಿಂದ ಕುಂಟಿತವಾಗಿದ್ದ ಮೈಸೂರು ಪ್ರವಾಸೋದ್ಯಮ ಅನ್​​ಲಾಕ್​​ ನಂತರ ಚೇತರಿಕೆ ಕಾಣುತ್ತಿದೆ.

ಸಾಂಸ್ಕೃತಿಕ ನಗರಿಯಲ್ಲಿ ಪ್ರವಾಸೋದ್ಯಮವೇ ಇಲ್ಲಿನ ಜನರ ಆದಾಯದ ಮೂಲವಾಗಿದ್ದು, ಕೋವಿಡ್​​ನಿಂದ ಕಳೆದ 6 ತಿಂಗಳಿನಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು. ಅನ್ ಲಾಕ್ ನಂತರವೂ ನಗರದಲ್ಲಿರುವ ಅರಮನೆ, ಚಾಮುಂಡಿ ಬೆಟ್ಟ , ಮೃಗಾಲಯ, ಚರ್ಚ್, ಕೆ.ಆರ್.ಎಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಅಂತರಾಷ್ಟ್ರೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಬರುತ್ತಿಲ್ಲ. ಸ್ಥಳೀಯವಾಗಿ ಅಲ್ಪಸ್ವಲ್ಪ ಪ್ರವಾಸಿಗರು ಮಾತ್ರ ಆಗಮಿಸುತ್ತಿದ್ದು, ಪ್ರವಾಸೋದ್ಯಮ ಸ್ವಲ್ಪ ಚೇತರಿಕೆ ಕಾಣುತ್ತಿದೆ.

ಅನ್​​ ಲಾಕ್​​​​ ನಂತರ ಮೈಸೂರಿನಲ್ಲಿ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮ

ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ತೊಂದರೆಯಾದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ದೊಡ್ಡ ತೊಂದರೆಯಾಗಿತ್ತು. ಪ್ರವಾಸಿ ಸ್ಥಳಗಳಿಗೆ ಜನರು ಬರುತ್ತಿಲ್ಲ ಇದರಿಂದ ಹೋಟೆಲ್ ಸೇರಿದಂತೆ ಪ್ರಮುಖ ವ್ಯಾಪಾರಿ ಮಾಲ್​​ಗಳಲ್ಲಿ ಜನರು ಇಲ್ಲ.

ಇದರಿಂದ ಬಿಸಿನೆಸ್ ಸಂಪೂರ್ಣ ಬಿದ್ದು ಹೋಗಿದ್ದು, ಇದರ ಬಗ್ಗೆ ಸರ್ಕಾರ ಜನರಿಗೆ ಧೈರ್ಯ ತುಂಬಬೇಕು, ಹಣಕಾಸಿನ ಸಹಾಯ ಮಾಡಬೇಕು, ವ್ಯಾಪಾರಿ ಲೋನ್​​ಗಳನ್ನು ನೀಡಬೇಕು. ಜೊತೆಗೆ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ವ್ಯಾಪಾರಿ ಪುನೀತ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.