ETV Bharat / state

ಸೊಪ್ಪು ಮಾರುತ್ತಾ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ: ಮೊಬೈಲ್‌ಗಾಗಿ ಬಡ ವಿದ್ಯಾರ್ಥಿನಿಯ ಚಡಪಡಿಕೆ - ಮೈಸೂರು ಲೇಟೆಸ್ಟ್ ನ್ಯೂಸ್

ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಮನೆಯಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಬಡ ವಿದ್ಯಾರ್ಥಿಗಳು ತರಗತಿಗಳನ್ನು ಕೇಳಲು ಮೊಬೈಲ್​​, ಲ್ಯಾಪ್​ಟಾಪ್​ ಇಲ್ಲದೆ ಪರದಾಡುತ್ತಿದ್ದಾರೆ. ಇಲ್ಲೊಬ್ಬ ವಿದ್ಯಾರ್ಥಿನಿಯ ಪಾಡು ಕೂಡಾ ಇದೇ ಆಗಿದ್ದು ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ.

ಸಹಾಯಹಸ್ತ ಕೋರಿದ ವಿದ್ಯಾರ್ಥಿನಿ
Mysore SSLC Student asking help for publics to listening online classes
author img

By

Published : Jul 2, 2021, 8:57 PM IST

ಮೈಸೂರು: ಕೊರೊನಾದಿಂದ ಶಾಲೆಗಳು ಬಂದ್​ ಆಗಿದ್ದು, ಆನ್​ಲೈನ್​ ತರಗತಿಗಳು ನಡೆಯುತ್ತಿವೆ. ಆದರೆ ಕೆಲ ಬಡ ವಿದ್ಯಾರ್ಥಿಗಳು ಫೋನ್​, ಲ್ಯಾಪ್​ಟಾಪ್​ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸೊಪ್ಪು ಮಾರುತ್ತಾ ಜೀವನ ಸಾಗಿಸುತ್ತಿರುವ ಬಡ ವಿದ್ಯಾರ್ಥಿನಿಯೋರ್ವಳು ಆನ್​ಲೈನ್​ ಪಾಠಕ್ಕೆ ಮೊಬೈಲ್‌ ಖರೀದಿಸಲು ಸಹಾಯ ಮಾಡುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾಳೆ.

ಸಹಾಯಹಸ್ತ ಕೋರಿದ ವಿದ್ಯಾರ್ಥಿನಿ

ವಿಡಿಯೋದಲ್ಲಿ ನೀವು ಗಮನಿಸುವಂತೆ, ಸೊಪ್ಪು ಮಾರುತ್ತಾ ಕುಳಿತಿರುವ ವಿದ್ಯಾರ್ಥಿನಿಯ ಹೆಸರು ಕೀರ್ತನ. ಈಕೆ ಎಸ್​ಎಸ್​​ಎಲ್​ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಾತಗಳ್ಳಿ ನಿವಾಸಿಯಾಗಿದ್ದಾಳೆ. ಇದೇ ತಿಂಗಳಿನಲ್ಲಿ ಎಸ್​ಎಸ್​​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಸೊಪ್ಪು ಮಾರುವ ಸ್ಥಳದಲ್ಲೇ ತನ್ನ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಈಕೆಯ ತಂದೆ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್​​‌ನಿಂದ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಪರಿಣಾಮ ಮನೆಯಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದು, ಮನೆಯ ಕಷ್ಟ ನೋಡಲಾರದೆ ಕೀರ್ತನ ಬೆಳಿಗ್ಗೆ ತಂದೆಯ ಜೊತೆ ಸೊಪ್ಪು ಮಾರಿ ಮಧ್ಯಾಹ್ನ ವಿದ್ಯಾಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ.

ಎಸ್​ಎಸ್​ಎಲ್​ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಆನ್​​​ಲೈನ್ ತರಗತಿಗಳನ್ನು ಕೇಳಲು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಇಲ್ಲದೆ ಕಷ್ಟವಾಗಿದ್ದು, ದಯವಿಟ್ಟು ದಾನಿಗಳು ನನಗೆ ಒಂದು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಈಕೆಗೆ ಸಹಾಯ ಮಾಡಲು ಬಯಸುವವರು ಆಕೆಯ ತಂದೆ ಮೊಬೈಲ್​ ನಂಬರ್​ ಸಂಪರ್ಕಿಸಬಹುದು. ಹನುಮಂತು: 8884908716

ETV Bharat Logo

Copyright © 2024 Ushodaya Enterprises Pvt. Ltd., All Rights Reserved.