ಮೈಸೂರು : ವಿವಿಐಪಿಗಳು ಕೂರುವ ಸ್ಥಳದಲ್ಲಿ ಮೇಯರ್ಗೆ ಕೊನೆ ಕುರ್ಚಿ ಮೀಸಲಿಟ್ಟಿದ್ದಕ್ಕೆ ಅವರು ಮೀಡಿಯಾ ಗ್ಯಾಲರಿಯಲ್ಲಿ ಕುಳಿತು ದಸರಾ ಕಾರ್ಯಕ್ರಮವನ್ನ ವೀಕ್ಷಿಸಿದ್ದಾರೆ.
ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಮೇಯರ್ ಸುನಂದಾ ಪಾಲನೇತ್ರಗೆ ಕೊನೆಯ ಕುರ್ಚಿ ಮೀಸಲಿಟ್ಟಿತ್ತು. ಆದರೆ, ಅವರು ಅಲ್ಲಿ ಕೂರದೆ, ಮಾಧ್ಯಮ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ರು.
ಕಾರ್ಯಕ್ರಮದಲ್ಲಿ ಸಚಿವ ಎಸ್ ಟಿ ಸೋಮಶೇಖರ್, ರೆಸಾರ್ಟ್ ಅಂಡ್ ಜಂಗಲ್ ಲಾಡ್ಜ್ ಅಧ್ಯಕ್ಷ ಅಪ್ಪಣ್ಣ ಹಾಗೂ ಇತರ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ: ಪದವಿಪೂರ್ವ ಕೋರ್ಸ್‌ಗಳಿಗೆ ಕನ್ನಡ ಕಡ್ಡಾಯ : ಹೈಕೋರ್ಟ್ ಸಾಂವಿಧಾನಿಕ ಸಿಂಧುತ್ವ ಪರಿಶೀಲನೆ