ETV Bharat / state

ಮೈಸೂರು ದಸರಾ 2022: 50.5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ - dasara programs

ಮೈಸೂರು ದಸರಾ ಆಚರಣೆ ಹಿನ್ನೆಲೆ 35 ಕೋಟಿ ರೂ. ಹಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ ಹಾಗೂ ಮೂಡಾದಿಂದ 10 ಕೋಟಿ ಹಣವನ್ನು ಸರ್ಕಾರದ ಅನುಮೋದನೆ ಪಡೆದು ಬಳಸಿಕೊಳ್ಳಲು ಸರ್ಕಾರದ ಅನುಮತಿ ಕೇಳಲಾಗಿದೆ

Mysore Dussehra 2022 proposal submission for 50.5 crore grant
ಮೈಸೂರು ದಸರಾ
author img

By

Published : Sep 3, 2022, 2:18 PM IST

ಮೈಸೂರು: ಮೈಸೂರು ದಸರಾ ಆಚರಣೆ ಹಿನ್ನೆಲೆ 35 ಕೋಟಿ ರೂ. ಹಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷ ಸರಳವಾಗಿ ನಾಡಹಬ್ಬ ದಸರಾವನ್ನು ಆಚರಿಸಲಾಗಿತ್ತು. ಇದರಿಂದ ಪ್ರವಾಸೋದ್ಯಮದ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ಈ ಬಾರಿ ಕೋವಿಡ್​ ತಗ್ಗಿದ್ದು, ಅದ್ಧೂರಿ ದಸರಾ ಆಚರಿಸಲು ಈಗಾಗಲೇ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆದಿದೆ. ಮೈಸೂರು ಜಿಲ್ಲಾಧಿಕಾರಿ ದಸರಾದ ವಿಶೇಷ ಅಧಿಕಾರಿಯಾಗಿ ಹಾಗೂ ಇತರೆ ಸಮಿತಿಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಯುವ ಸಂಭ್ರಮ, ಯುವ ದಸರಾ, ದಸರಾ ಚಲನಚಿತ್ರೋತ್ಸವ, ಕವಿಗೋಷ್ಠಿ, ದಸರಾ ಆಹಾರ ಮೇಳ, ದಸರಾ ನಾಟಕೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಪುಸ್ತಕೋತ್ಸವ ಸೇರಿದಂತೆ ಅದ್ಧೂರಿ ಜಂಬೂ ಸವಾರಿಯ ಮೆರವಣಿಗೆಯ ಕಲಾ ತಂಡಗಳು, ಸ್ತಬ್ಧ ಚಿತ್ರ ಮೆರವಣಿಗೆ ಸೇರಿದಂತೆ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರಯೋಜಕತ್ವದಿಂದ ಬಂದ ಹಣ ಹಾಗೂ ಇತರ ಎಲ್ಲಾ ಖರ್ಚು ವೆಚ್ಚಗಳಿಗೆ ಸುಮಾರು 35 ಕೋಟಿಗಳನ್ನು ನೀಡುವಂತೆ ಮಂಗಳವಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Mysore Dussehra 2022 proposal submission for 50.5 crore grant
ಮೈಸೂರು ದಸರಾ ಸಿದ್ಧತೆಗೆ ಸಭೆ

ಇದರ ಜೊತೆಗೆ ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ ಹಾಗೂ ಮೂಡಾದಿಂದ 10 ಕೋಟಿ ಹಣವನ್ನು ಅನುಮೋದನೆ ಪಡೆದು ಬಳಸಿಕೊಳ್ಳಲು ಸರ್ಕಾರದ ಅನುಮತಿ ಕೇಳಲಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ. ಸರ್ಕಾರದಿಂದ 35.5 ಕೋಟಿ, ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ, ಮೂಡಾದಿಂದ 10 ಕೋಟಿ ಸೇರಿ ಒಟ್ಟು 50.5 ಕೋಟಿ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ.. ವಿಡಿಯೋ ವೈರಲ್​

ಕಳೆದ 5 ವರ್ಷಗಳಲ್ಲಿ ಅಂದರೆ 2017ರಲ್ಲಿ ದಸರಾ ಕಾರ್ಯಕ್ರಮಗಳಿಗೆ 15 ಕೋಟಿ, 2018ರಲ್ಲಿ 15 ಕೋಟಿ, 2019ರಲ್ಲಿ 23.83 ಕೋಟಿ, 2020 ಸರಳ ದಸರಾಗೆ 2.91 ಕೋಟಿ, 2021ರ ಸರಳ ದಸರಾಗೆ 5.42 ಕೋಟಿಯನ್ನು ವೆಚ್ಚ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.