ETV Bharat / state

ತುರ್ತು ವಾಹನ ಸಂಚಾರಕ್ಕೆ ಅಡ್ಡಿ ಪ್ರಕರಣ: ಕಾರು ಚಾಲಕನಿಗೆ 11 ಸಾವಿರ ರೂ. ದಂಡ - ತುರ್ತು ವಾಹನ ಸಂಚಾರಕ್ಕೆ ಅಡ್ಡಿ ಪ್ರಕರಣ

ತುರ್ತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಕಾರು ಚಾಲಕನಿಗೆ ಮೈಸೂರು ಜಿಲ್ಲಾ ನ್ಯಾಯಾಲಯ 11ಸಾವಿರ ರೂ. ದಂಡ ವಿಧಿಸಿದೆ.

Mysore district court fined car driver
ತುರ್ತು ವಾಹನ ಸಂಚಾರಕ್ಕೆ ಅಡ್ಡಿ: ಕಾರು ಚಾಲಕನಿಗೆ ದಂಡ
author img

By

Published : Sep 5, 2020, 2:02 PM IST

ಮೈಸೂರು: ಆ್ಯಂಬುಲೆನ್ಸ್​​ಗೆ ಜಾಗ ಬಿಡದೆ ಕಾರು ಚಾಲಕನೊಬ್ಬ ತೋರಿದ ದುರ್ವತನೆಗೆ ಮೈಸೂರು ಜಿಲ್ಲಾ ನ್ಯಾಯಾಲಯ ಕಾರು ಚಾಲನಿಗೆ 11ಸಾವಿರ ರೂ. ದಂಡ ವಿಧಿಸಿದೆ.

ಘಟನೆಯ ವಿವರ: ಚಿಕ್ಕಮಗಳೂರಿನ ಚಂದ್ರಶೇಖರ ಆಚಾರ್ಯ ಎಂಬ 85 ವರ್ಷದ ವೃದ್ಧರು ಕಾರು ಚಾಲಕನ ಜಗಳದಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಆ. 22ರಂದು ವೃದ್ಧ ಚಂದ್ರಶೇಖರ ಅವರಿಗೆ ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿಗೆ ಆ್ಯಂಬುಲೆನ್ಸ್​​​ನಲ್ಲಿ ರಾತ್ರಿ 8:30 ಗಂಟೆಗೆ ಹುಣಸೂರು ರಸ್ತೆಯ ಬೆಳವಾಡಿ ಗೇಟ್ ಬಳಿ ಬರುತ್ತಿದ್ದರು. ಆ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಮುಂದೆ ಹೋಗುತ್ತಿದ್ದ ಕಾರು ಅಡ್ಡವಿರುವುದರಿಂದ ಆ್ಯಂಬುಲೆನ್ಸ್ ಚಾಲಕ ಹಾರ್ನ್ ಮಾಡಿ ಸೈರನ್ ಹಾಕಿದರೂ ಕೂಡ ಕಾರಿನ ಚಾಲಕ ದಾರಿ ಬಿಡಲಿಲ್ಲ. ಹೂಟಗಳ್ಳಿಗೆ ಬರುವವರೆಗೂ ದಾರಿ ಬಿಡದೆ ಕಾರು ಚಾಲಕ ಮೊಂಡುತನ ತೋರಿದ್ದಾನೆ. ಆ್ಯಂಬುಲೆನ್ಸ್ ಚಾಲಕ ಕಿಶೋರ್ ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಕೆರಳಿದ ಕಾರು ಚಾಲಕ ವಾಗ್ವಾದಕ್ಕೆ ಇಳಿದು ಸುಮಾರು15 ನಿಮಿಷದವರೆಗೂ ಜಗಳವಾಡಿದ್ದಾ‌ನೆ. ಆ ಸಮಯದಲ್ಲಿ ಆ್ಯಂಬುಲೆನ್ಸ್​​ನಲ್ಲಿದ್ದ ವೃದ್ಧ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಸಾವನ್ನಪ್ಪಿದ್ದರು.

ಕಾರು ಚಾಲನಿಗೆ 11,000 ರೂ. ದಂಡ: ಆ್ಯಂಬುಲೆನ್ಸ್ ಚಾಲಕ ಕಿಶೋರ್ ಜಗಳದ ನಂತರ ಮೃತದೇಹದೊಂದಿಗೆ ನೇರವಾಗಿ ವಿ.ವಿ.ಪುರಂ ಸಂಚಾರ ಠಾಣೆಗೆ ತೆರಳಿ ಹುಂಡೈ ಐ-20 ಕಾರ್ ನಂಬರ್ ಸಮೇತ ಕಾರು ಚಾಲಕನ ವಿರುದ್ಧ ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಪೊಲೀಸರು ಮಾಹಿತಿ ಕಲೆಹಾಕಿ ಕಾರು ಚಾಲಕ ಜಗದೀಶ್ ಹಾಗೂ ಅವರ ಮಗ ಜಯಂತ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದರು.

ತುರ್ತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿ ಜಯಂತ್​​ಗೆ 11 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.