ETV Bharat / state

ರೈತ ದಸರಾದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ; ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಗೀತಾ ಚೌಡಯ್ಯ

ರೈತ ದಸರಾದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

Mysore Dasara 2023 Geetachowdayya won first place in milking competition
ರೈತ ದಸರಾದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ; ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಗೀತಾ ಚೌಡಯ್ಯ
author img

By ETV Bharat Karnataka Team

Published : Oct 22, 2023, 7:24 AM IST

ಮೈಸೂರು: ನಾಡಹಬ್ಬ ದಸರಾದ ಅಂಗವಾಗಿ ರೈತ ದಸರಾ ಸಮಿತಿ ವತಿಯಿಂದ ಶನಿವಾರ ಜೆ.ಕೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಹಸು 46.690 ಕೆ.ಜಿ ಹಾಲು ನೀಡುವ ಮೂಲಕ 50 ಸಾವಿರ ರೂಪಾಯಿ ಮೊತ್ತದ ಚೆಕ್​ ಹಾಗೂ ಟ್ರೋಫಿಯನ್ನು ತನ್ನ ಮಾಲೀಕನಿಗೆ ದೊರಕಿಸಿಕೊಟ್ಟಿದೆ.

ಮಂಡ್ಯ ಜಿಲ್ಲೆಯ ದುದ್ದಗ್ರಾಮದ ಶೀರ ಹೆಗಡೆ ಅವರ ಹಸು 36.450 ಕೆ.ಜಿ ಹಾಲು ನೀಡಿದ್ದರಿಂದ ದ್ವಿತೀಯ ಸ್ಥಾನ ಪಡೆದು, 40 ಸಾವಿರ ರೂ. ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಮೈಸೂರಿನ ಕಾಟಪ್ಪ ಗರಡಿ ಸಮೀಪದ ನಿವಾಸಿ ಪಿ. ಸಾರವ್ ವಿನೋದ್ ರವೀಂದ್ರ ಅವರ ಹಸು 34.160 ಕೆ.ಜಿ ಹಾಲು ನೀಡಿದ್ದರಿಂದ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ಹಾಗೂ ಟ್ರೋಫಿ ಪಡೆದುಕೊಂಡರು. ಬೆಂಗಳೂರಿನ ಆನೇಕಲ್‌ನ ಪಿ.ಶ್ರೀನಿವಾಸ್ ಅವರ ಹಸು 34.070 ಕೆ.ಜಿ. ಹಾಲು ನೀಡಿದ್ದರಿಂದ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು. ಇವರಿಗೆ 10 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಯಿತು.

Mysore Dasara 2023 Geetachowdayya won first place in milking competition
ರೈತ ದಸರಾದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ

ಈ ಸ್ಪರ್ಧೆಯಲ್ಲಿ ಐದು ಜಿಲ್ಲೆಗಳ 10 ಸ್ಪರ್ಧಿಗಳು ಭಾಗವಹಿಸಿ, ನಿನ್ನೆ (ಶನಿವಾರ) ಬೆಳಗ್ಗೆ ಹಸುವಿನ ಹಾಲನ್ನು ಕರೆದರು. ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಕರೆದ ಹಾಲಿನ ತೂಕವನ್ನು ಪರಿಗಣಿಸಿ ಬಹುಮಾನ ನೀಡಲಾಗಿದೆ. ಸ್ಪರ್ಧೆಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ಜಿಲ್ಲೆಯಿಂದ 10 ಜನ ರೈತರು ಇದ್ದರು. ಅದರಲ್ಲಿ ಬೆಳಗ್ಗೆ ಹಾಗೂ ಸಂಜೆ ಸೇರಿದಂತೆ ಹಾಲು ಕರೆದ ಸ್ಪರ್ಧಿಗಳ ವಿವರ ಹೀಗಿದೆ.

ಇದನ್ನೂ ಓದಿ: ದಸರಾ ಗೋಲ್ಡ್ ಕಾರ್ಡ್, ಟಿಕೆಟ್​ಗೆ​ ಬೇಡಿಕೆ: ಪಾಸ್​ ಖರೀದಿಗೆ ಮತ್ತೆ ಅವಕಾಶ ನೀಡಿದ ಜಿಲ್ಲಾಡಳಿತ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಕುಮಾರ್ 24.370 ಕೆ.ಜಿ, ಮಂಡ್ಯದ ಗೋಪಾಲಕೃಷ್ಣ 36.450 ಕೆ.ಜಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮನ್ವಿತ್ ಗೌಡ 41.230 ಕೆ.ಜಿ, ನಂಜನಗೂಡಿನ ತಾಂಡವಪುರ ಗ್ರಾಮದ ಬಸವಯ್ಯ 29.160 ಕೆ.ಜಿ, ಮಂಡ್ಯ ಜಿಲ್ಲೆಯ ಶ್ರೀ ರಂಗಪಟ್ಟಣದ ಚಂದಗಾಲದ ವರದರಾಜು 21.160 ಕೆ.ಜಿ, ಬೆಂಗಳೂರು ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ 46.690 ಕೆ.ಜಿ, ಚಾಮರಾಜನಗರದ ಶಿವಮಲ್ಲಪ್ಪ 18.800 ಕೆ.ಜಿ, ಆನೇಕಲ್​ನ ಶ್ರೀನಿವಾಸ್ 34.070 ಕೆ.ಜಿ, ಮೈಸೂರಿನ ಸಾರವ್ ರವೀಂದ್ರ 34.160 ಕೆ.ಜಿ, ಬೆಂಗಳೂರಿನ ಯಧುನಂದನ್ 31.680 ಕೆ.ಜಿ ಹಾಲನ್ನು ಬೆಳಗ್ಗೆ ಸಂಜೆವರೆಗೆ ಸೇರಿಸಿ ಕರೆದಿದ್ದಾರೆ.

Mysore Dasara 2023 Geetachowdayya won first place in milking competition
ರೈತ ದಸರಾದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ; ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಗೀತಾ ಚೌಡಯ್ಯ

ಇನ್ನೂ ವಿಜೇತರಿಗೆ ಬಹುಮಾನವನ್ನು ಸಚಿವ ಕೆ.ವೆಂಕಟೇಶ್ ನೀಡಿದರು. ಈ ವೇಳೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ್‌ಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ. ರೂಪ, ರೈತ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಡಾ. ಎಂ.ಕೃಷ್ಣರಾಜು, ಕಾರ್ಯಾಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಅಧ್ಯಕ್ಷ ಕೆ.ಪಿ. ಯೋಗೇಶ್, ಉಪಾಧ್ಯಕ್ಷ ಮಾಲೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ರೈತ ದಸರಾದಲ್ಲಿ ಹಾಲು ಕರೆಯುವ ಸ್ಪರ್ಧೆ; ವಿಜೇತರಿಗೆ ಸಿಗಲಿದೆ ಭಾರಿ ಮೊತ್ತದ ಬಹುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.