ಮೈಸೂರು: ಪತಿ ಬುದ್ಧಿ ಹೇಳಿದ್ದಕ್ಕೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರಿನ ವಿಜಯನಗರ ಬಡಾವಣೆ 4ನೇ ಹಂತದ ನಿವಾಸಿ ಅಭಿಷೇಕ್ ಎಂಬುವರ ಪತ್ನಿ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕಮಗಳೂರಿನ ನಿವಾಸಿಯಾದ ನಂದಿನಿ, 5 ವರ್ಷಗಳ ಹಿಂದೆ ಮೈಸೂರಿನ ಅಭಿಷೇಕ್ನನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು.
ಓದಿ:ಮೇಯರ್ಗೆ ಮುತ್ತು ಕೊಟ್ಟು ಖುಷಿ ಪಟ್ಟ ಮಾದೇಗೌಡ: ವಿಡಿಯೋ
ಕೆ-ಸೆಟ್ ಪರೀಕ್ಷೆಗೆ ಪ್ರಿಪೇರ್ ಆಗುತ್ತಿದ್ದ ಈಕೆ, ಮಕ್ಕಳು ಗಲಾಟೆ ಮಾಡುತ್ತಿದ್ದಾಗ ಅವರನ್ನು ಸಮಾಧಾನ ಮಾಡುವಂತೆ ಪತಿ ಅಭಿಷೇಕ್ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಬೇಸತ್ತ ನಂದಿನಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.