ಮೈಸೂರು: ಮೂರು ದಿನದ ಹಿಂದೆ ಮೈಸೂರು ನಗರದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಎನ್ ಪ್ರಕಾಶ್ ಗೌಡ ಮತ್ತೆ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ ಆ ಜಾಗಕ್ಕೆ ಹಿಂದಿನ ಡಿಸಿಪಿ ಮುತ್ತುರಾಜ್ ಅವರು ಮರು ನೇಮಕಗೊಂಡಿದ್ದಾರೆ.
![Muttiraj is re-appointed as DCP of Law and Order DCP in Mysore](https://etvbharatimages.akamaized.net/etvbharat/prod-images/kn-mys-3-dcp-news-7208092_21122019151015_2112f_1576921215_80.jpg)
ಕಳೆದ ಮೂರು ದಿನಗಳ ಹಿಂದೆ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಎನ್.ಪ್ರಕಾಶ್ ಗೌಡ ಮರು ವರ್ಗಾವಣೆಗೊಂಡಿದ್ದಾರೆ. ಇನ್ನೂ ಇದೇ ಸ್ಥಾನದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದ ಮುತ್ತುರಾಜ್ ಬೆಂಗಳೂರಿಗೆ ಬಡ್ತಿ ಪಡೆದು ಹೋಗಿದ್ದರು. ಆದರೆ, ಮೂರು ದಿನದ ನಂತರ ಮತ್ತೆ ಮೈಸೂರು ಡಿಸಿಪಿಯಾಗಿ ಮರು ನೇಮಕಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ರಾತ್ರಿಯೇ ಮುತ್ತುರಾಜ್ ಅವರು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.