ETV Bharat / state

'ಅಧಿಕಾರಿಗಳಿಂದ ಅಗೌರವ': ಗುದ್ದಲಿ ಪೂಜೆ ಮಾಡದೆ ವಾಪಸಾದ ಸುಮಲತಾ ಅಂಬರೀಶ್

ನಾಲೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಸಂಸದೆ ಸುಮಲತಾ ಅಂಬರೀಶ್ ತೆರಳಿದ್ದರು. ಗುದ್ದಲಿ ಪೂಜೆ ನಡೆಸುವ ಸ್ಥಳದಲ್ಲಿ ಸರಿಯಾದ ಶಾಮಿಯಾನ, ಕುರ್ಚಿ ವ್ಯವಸ್ಥೆ ಮಾಡದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಅವರು ಕೋಪಗೊಂಡರು.

ಸಂಸದೆ ಸುಮಲತಾ
ಸಂಸದೆ ಸುಮಲತಾ
author img

By

Published : Mar 9, 2022, 6:08 PM IST

Updated : Mar 9, 2022, 6:52 PM IST

ಮೈಸೂರು: ಕೆ.ಆರ್.​ನಗರದ ಚೌಕಹಳ್ಳಿಯಲ್ಲಿ ನಾಲೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲು ತೆರಳಿದ್ದ ಸಂಸದೆ ಸುಮಲತಾ ಅಂಬರೀಶ್, ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಗುದ್ದಲಿ ಪೂಜೆ ನೆರವೇರಿಸದೆ ವಾಪಸ್ ಆದರು.

ಕಾರ್ಯಪಾಲಕ ಅಭಿಯಂತರ ಜಿ.ಜೆ.ಈರಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಜೆ.ಗುರುರಾಜ್ ಹಾಗೂ ಇಂಜಿನಿಯರ್ ಅಭಿಲಾಷ್ ಅವರನ್ನು ಈ ಸಂದರ್ಭದಲ್ಲಿ ಸಂಸದೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ, ಕುಶಾಲನಗರ ವೃತ್ತ ಸೂಪರಿಂಟೆಂಡೆಂಟ್ ಇಂಜಿನಿಯರ್ ಚೆನ್ನಕೇಶವ ಅವರಿಗೂ ಕರೆ ಮಾಡಿ ಗರಂ ಆದರು.

ನಾಲೆ ದುರಸ್ತಿ ಕಾಮಗಾರಿಯನ್ನು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪ್ರತಿನಿಧಿಸುವ ಕೆ.ಆರ್.ನಗರದ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಸಂಸದರ ನಿಧಿಯಿಂದ ಕೈಗೊಳ್ಳಲಾಗಿತ್ತು. ಈ ವೇಳೆ ಸರಿಯಾದ ವ್ಯವಸ್ಥೆ ಇಲ್ಲದೆ ಸಂಸದರಿಗೆ ಅಧಿಕಾರಿಗಳು ಅಗೌರವ ತೋರಿದ್ದಾರೆ. ನನಗೆ ಪ್ರತಿ ಬಾರಿ ಅಧಿಕಾರಿಗಳು ಹೀಗೆಯೇ ಮಾಡುತ್ತಿದ್ದಾರೆ. ಇಲ್ಲಿ ಶಿಸ್ತುಬದ್ಧ ವ್ಯವಸ್ಥೆ ಮಾಡಿಲ್ಲ. ಇದರ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಗೆ ದೂರು ನೀಡುತ್ತೇನೆ ಎಂದು ಸುಮಲತಾ ಅಂಬರೀಶ್​ ತಿಳಿಸಿದರು.

Last Updated : Mar 9, 2022, 6:52 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.