ಮೈಸೂರು: ತಜ್ಞರ ಸಮಿತಿಯ ವರದಿಗೆ ಬದ್ಧರಾಗಿ, ಕೊರೊನಾ ನಡುವೆ ದಸರಾ ಆಚರಣೆ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಜಂಬೂ ಸವಾರಿ ಮೆರವಣಿಗೆಗೆ ತಜ್ಞರ ಸಮಿತಿ 300 ಜನರಿಗೆ ಮಾತ್ರ ಶಿಫಾರಸು ಮಾಡಿರುವ ವರದಿಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ಜೊತೆಗೆ ಜನರ ಪ್ರಾಣವೂ ಮುಖ್ಯವಾಗಿರುವುದರಿಂದ, ತಜ್ಞರ ಸಮಿತಿ ನೀಡಿರುವ ವರದಿಯಂತೆ ದಸರಾ ಆಚರಣೆ ಮಾಡಲಾಗುವುದು ಎಂದರು.
ಅಲ್ಲದೇ, ದಸರಾ ಉದ್ಘಾಟನೆ ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸಿ.ಎನ್.ಮಂಜುನಾಥ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಬೆಂಗಳೂರು, ಮೈಸೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಆಸ್ಪತ್ರೆ ತೆರೆದು, ಡಾ.ಮಂಜುನಾಥ್ ಅವರು ಜನರಿಗೆ ಅಪಾರ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.