ETV Bharat / state

ಮೈಸೂರಿನಿಂದ ರಾಮೇಶ್ವರಂಗೆ ರೈಲುಸೇವೆ ಆರಂಭಿಸಲು ರೈಲ್ವೇ ಸಚಿವರಿಗೆ ಪ್ರತಾಪ್​ ಸಿಂಹ ಮನವಿ

author img

By ETV Bharat Karnataka Team

Published : Dec 7, 2023, 10:14 PM IST

ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಸಂಸದ ಪ್ರತಾಪ್​ ಸಿಂಹ ಅವರು ಮೈಸೂರಿನಿಂದ ರಾಮೇಶ್ವರಂಗೆ ಸಾಪ್ತಾಹಿಕ ರೈಲು ಸಂಪರ್ಕಕ್ಕೆ ಮನವಿ ಮಾಡಿದರು.

ಸಂಸದ ಪ್ರತಾಪ್​ ಸಿಂಹ
ಸಂಸದ ಪ್ರತಾಪ್​ ಸಿಂಹ

ಮೈಸೂರು: ಮೈಸೂರಿನಿಂದ ರಾಮೇಶ್ವರಂಗೆ ಸಾಪ್ತಾಹಿಕ ರೈಲು ಸೇವೆ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಂಸದ ಪ್ರತಾಪ್​ ಸಿಂಹ ಮನವಿ ಸಲ್ಲಿಸಿದ್ದಾರೆ. ಬಾರ್ಮೆರ್-ಯಶವಂತಪುರ ರೈಲನ್ನು ಮೈಸೂರಿನವರಗೆ ವಿಸ್ತರಿಸುವಂತೆ ಹಾಗೂ ಮೈಸೂರಿನಿಂದ ರಾಮೇಶ್ವರಂ ಸಾಪ್ತಾಹಿಕ ರೈಲು (ವೀಕ್ಲಿ ಟ್ರೈನ್) ಪ್ರಾರಂಭಿಸುಂತೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಇದಕ್ಕೆ ಸಚಿವ ಅಶ್ವಿನ್ ವೈಷ್ಣವ್ ಸ್ಪಂದಿಸಿದ್ದು, ಶೀಘ್ರದಲ್ಲೇ ಅನುಮೋದನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರೈಲ್ವೆ ಹಾಗೂ ಟೆಲಿಕಾಂ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಮೈಸೂರು ನಗರದ ಈ ಕೆಳಕಂಡ ಮುಕ್ತಾಯಗೊಂಡಿರುವ ಕಾಮಗಾರಿಗಳನ್ನು ಉದ್ಘಾಟನೆ ಮಾಡಿಕೊಡುವಂತೆಯೂ ಸಚಿವರನ್ನು ಇದೇ ಸಂದರ್ಭದಲ್ಲಿ ಪ್ರತಾಪ್​ ಸಿಂಹ ಆಹ್ವಾನಿಸಿದರು.

ಕಡಕೊಳ ಬಳಿ 55 ಎಕರೆ ಜಾಗದಲ್ಲಿ ಕಂಟೈನರ್ ಕಾರ್ಪೋರೇಶನ್ ಆಫ್ ಇಂಡಿಯಾದ ವತಿಯಿಂದ 102 ಕೋಟಿ ವೆಚ್ಚದಲ್ಲಿ ರೈಲ್ವೆ ಗೂಡ್ಸ್ ಟರ್ಮಿನಲ್, ಸುಮಾರು 30 ಕೋಟಿ ವೆಚ್ಚದಲ್ಲಿ ಮೈಸೂರು ನಗರದ ಆಶೋಕಪುರಂ ರೈಲ್ವೆ ಯಾರ್ಡ್ ಅನ್ನು ಒಂದು ಸುಸಜ್ಜಿತವಾದ ಸ್ಟೇಷನ್, ಪೂಟ್ ಓವರ್ ಬ್ರಿಡ್ಜ್, 2 ಪ್ಲಾಟ್ ಫಾರಂ, 2 ಸ್ಟೇಬಲಿಂಗ್ ಲೈನ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಂತೆ ಅಭಿವೃದ್ಧಿಪಡಿಸಲಾಗಿದೆ.

ಮೈಸೂರು ನಗರ ಹೊರವಲಯದಲ್ಲಿರುವ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ (ಇನ್ಪೋಸಿಸ್ ಬಳಿ) 27.64 ಕೋಟಿ ರೂ ವೆಚ್ಚದಲ್ಲಿ ಎಸ್‌ಡಿಪಿಐ (ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಆಫ್​ ಇಂಡಿಯಾ) ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಪಾರಂಪರಿಕ ಮೈಸೂರು ರೈಲ್ವೆ ನಿಲ್ದಾಣಕ್ಕೆ 140 ವರ್ಷಗಳ ಸಂಭ್ರಮ.. ಕೇಕ್ ಕತ್ತರಿಸಿ ಸಂಭ್ರಮಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.