ETV Bharat / state

_____ಗೆ ಹುಟ್ಟಿದವರು ಮನೆಯಲ್ಲಿ ಮಹಿಷ ದಸರಾ ಮಾಡಿಕೊಳ್ಳಲಿ: ವೈರಲ್​ ಆಯ್ತು ಪ್ರತಾಪ್​ ಸಿಂಹ ವಿಡಿಯೋ

author img

By

Published : Sep 27, 2019, 11:37 AM IST

Updated : Sep 27, 2019, 3:45 PM IST

ಸಂಸದ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟದಲ್ಲಿ ಡಿಸಿಪಿ ವಿರುದ್ಧ ಹಾರಿಹಾಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡಿಸಿಪಿ ವಿರುದ್ಧ ಹಾರಿಹಾಯ್ದ ಸಂಸದ ಪ್ರತಾಪ್​ ಸಿಂಹ.

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಚಾಮುಂಡಿ ಬೆಟ್ಟದಲ್ಲಿ ಡಿಸಿಪಿ ವಿರುದ್ಧ ಹಾರಿಹಾಯ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರಗತಿಪರರಿಂದ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮಹಿಷಾಸುರ ಮೂರ್ತಿಯ ಪಕ್ಕ ವೇದಿಕೆ ಹಾಕಲಾಗುತ್ತಿತ್ತು. ಆಗ ಸ್ಥಳಕ್ಕಾಗಮಿಸಿದ ಸಂಸದ ಪ್ರತಾಪ್ ಸಿಂಹ ಅವರು ಸ್ಥಳೀಯ ಗ್ರಾಮ ಪಂಚಾಯತ್​ ನೌಕರರ ವಿರುದ್ಧ ಇಲ್ಲಿ ಶಾಮಿಯಾನ ಹಾಕಲು ಯಾರು ಅನುಮತಿ ನೀಡಿದರು ಎಂದು ಜೋರು ಧ್ವನಿಯಲ್ಲೇ ಕೇಳಿದ್ರು.

ಡಿಸಿಪಿ ವಿರುದ್ಧ ಹಾರಿಹಾಯ್ದ ಸಂಸದ ಪ್ರತಾಪ್​ ಸಿಂಹ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಡಿಸಿಪಿ ಮುತ್ತುರಾಜ್ ಅವರಿಗೆ ಪೊಲೀಸರೇ ನಿಮ್ಮಿಂದ ಇಂತಹ ಬೇಜವಾಬ್ದಾರಿ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಹಾರಿಹಾಯ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಕ್ಷಣ ಶಾಮಿಯಾನ ಹಾಗೂ ವೇದಿಕೆಯನ್ನು ತೆಗೆಯುವಂತೆ ಆದೇಶಿಸಿದರು. ನಂತರ ವೇದಿಕೆಯನ್ನು ತೆರವುಗೊಳಿಸಲಾಯಿತು.

Intro:ಮೈಸೂರು: ಸಂಸದ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟದಲ್ಲಿ ಡಿಸಿಪಿ ವಿರುದ್ಧ ಹಾರಿಹಾಯ್ದ ಘಟನೆ ನಡೆದಿದ್ದು. ಈ ವಿಡಿಯೋ ಈಗ ವೈರಲ್ ಆಗಿದೆ.
Body:
ನೆನ್ನೆ ಸಂಜೆ ಪ್ರಗತಿಪರರು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಮಹಿಷಾಸುರ ಮೂರ್ತಿಯ ಪಕ್ಕ ವೇದಿಕೆ ಹಾಕಲಾಗುತ್ತಿತ್ತು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಂಸದ ಪ್ರತಾಪ್ ಸಿಂಹ ಸ್ಥಳೀಯ ಗ್ರಾಮ ಪಂಚಾಯತಿ ನೌಕರರ ವಿರುದ್ಧ ಇಲ್ಲಿ ಶಾಮಿಯಾನ ಹಾಕಲು ಯಾರು ಅನುಮತಿ ನೀಡಿದರು ಎಂದು ಜೋರು ಧ್ವನಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಡಿಸಿಪಿ ಮುತ್ತುರಾಜ್ ಅವರಿಗೆ ಪೋಲಿಸರೇ ನಿಮ್ಮಿಂದ ಇಂತಹ ಷಂಡತನ ನಿರೀಕ್ಷೆ ಮಾಡಿರಲಿಲ್ಲ ಎಂದು ಹಾರಿಹಾಯ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ನಗರ ಪೋಲಿಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಕ್ಷಣ ಶಾಮಿಯಾನ ಹಾಗೂ ವೇದಿಕೆಯನ್ನು ತೆಗೆಯುವಂತೆ ಹೇಳಿದರು.‌ ನಂತರ. ವೇದಿಕೆಯನ್ನು ತೆಗೆಯಲಾಯಿತು. ಪ್ರತಾಪ್ ಸಿಂಹ ಡಿಸಿಪಿ ವಿರುದ್ಧ ಹಾರಿಹಾಯ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.Conclusion:
Last Updated : Sep 27, 2019, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.