ಮೈಸೂರು: ಅಮೆರಿಕದಲ್ಲಿ ನಡೆದ ಶೂಟೌಟ್ನಲ್ಲಿ ಜಿಲ್ಲೆಯ ವಿದ್ಯಾರ್ಥಿ ಬಲಿಯಾಗಿದ್ದು, ಮೃತನ ಮನೆಗೆ ಇಂದು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಸಂತ್ವನ ಹೇಳಿದರು.
ಎರಡು ದಿನಗಳ ಹಿಂದೆ ಅಮೆರಿಕದಲ್ಲಿ ನಗರದ ಅಭಿಷೇಕ್ ಭಟ್ ಎಂಬ ವಿದ್ಯಾರ್ಥಿ ಅಪರಿಚಿತನ ಗುಂಡಿಗೆ ಬಲಿಯಾಗಿದ್ದು, ಇಂದು ವಿದ್ಯಾರ್ಥಿ ಕುಟುಂಬಕ್ಕೆ ಸದಸ್ಯರೊಂದಿಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಸಂತ್ವಾನ ಹೇಳಿದರು.
ಬಳಿಕ ಈ ವಿದ್ಯಾರ್ಥಿ ಅಮೆರಿಕದ ಉನ್ನತ್ತ ವಿದ್ಯಾಭ್ಯಾಸಕ್ಕಾಗಿ ಲಾಸ್ ಎಂಜಲೀಸ್ಗೆ ತೆರಳಿದ್ದರು. ಅಲ್ಲಿ ಅವರು ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದರು. ದುರಾದೃಷ್ಟವಶಾತ್ ಯಾವುದೋ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿದ ಶೂಟೌಟ್ನಿಂದ ಸಾವನ್ನಪ್ಪಿದ್ದಾನೆ. ಇನ್ನು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅಲ್ಲಿನ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದು, ಅವರ ಬಳಿ ಮಾತಾಡಿ, ಆದಷ್ಟು ಬೇಗ ಮೃತದೇಹವನ್ನು ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಇನ್ನು ಕುಟುಂಬದ ಸದಸ್ಯರು ಅಮೆರಿಕಕ್ಕೆ ಹೋಗಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಕಡೆಯಿಂದ ಮಾಡಲು ಈಗಾಗಲೇ ಕೇಂದ್ರದ ಜೊತೆ ಚರ್ಚಿಸಿದ್ದೇನೆ. ಅಮೆರಿಕದಲ್ಲಿ ಗನ್ ಲೈಸನ್ಸ್ ಸಂತೆಯಲ್ಲಿ ಕಡಲೇಪುರಿ ಮಾರಿದ ಹಾಗೆ ಸಿಗುತ್ತದೆ. ಇದರಿಂದ ನಮ್ಮ ವಿದ್ಯಾರ್ಥಿ ಬಲಿಯಾಗಿದ್ದಾನೆ. ಇದೊಂದು ದುಃಖದ ಸಂಗತಿ ಎಂದ ಸಂಸದರು ವಿಷಾದ ವ್ಯಕ್ತಪಡಿಸಿದರು.