ETV Bharat / state

ಹೆಚ್.ವಿಶ್ವನಾಥ್​ ಕಾರ್ಯಕರ್ತರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ.. ಸಂಸದ  ಪ್ರಜ್ವಲ್​ ರೇವಣ್ಣ ಕಿಡಿ

ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿಯಿಂದ ಕಣಕ್ಕಿಳಿದಿರುವ ಅನರ್ಹ ಶಾಸಕ, ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್​.ವಿಶ್ವನಾಥ್​ ವಿರುದ್ಧ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕಿಡಿಕಾರಿದ್ದಾರೆ.

ಪ್ರಜ್ವಲ್​ ರೇವಣ್ಣ ಹೇಳಿಕೆ
author img

By

Published : Nov 22, 2019, 7:05 PM IST

ಮೈಸೂರು: ಹುಣಸೂರಿನ ಈ ಹಿಂದಿನ ಶಾಸಕರು ಅವರ ಅನುಕೂಲಕ್ಕಾಗಿ ಕಾರ್ಯಕರ್ತರನ್ನು ನಡುದಾರಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಹೆಚ್.ವಿಶ್ವನಾಥ್ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದರು.

ಸಂಸದ ಪ್ರಜ್ವಲ್​ ರೇವಣ್ಣ..

ಹುಣಸೂರಿನ ಗೌಡಗೆರೆಯಲ್ಲಿ ಮತಯಾಚನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ವಲ್​, ಹೆಚ್​.ವಿಶ್ವನಾಥ್​ ಅವರಿಗೆ ಒಳ್ಳೆಯದಾಗಲಿ. ಅವರು ಪಕ್ಷ ಬಿಟ್ಟರೂ, ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ನಮ್ಮನ್ನು ಬಿಟ್ಟಿಲ್ಲ. ರಾಜಕೀಯ ಕಿಚ್ಚು ತೋರಿಸಲು ಕಾರ್ಯಕರ್ತರಿಗೆ ಹೇಳಲಾಗಿದೆ. ಶ್ರಮ ಹಾಕಿ ಜಯಭೇರಿ ಬಾರಿಸುತ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಜಿ ಟಿ ದೇವೇಗೌಡ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಅವರ ಸಮಯ ಕೇಳಿ ಮನೆಗೆ ಭೇಟಿ ನೀಡಿ ಉಪ ಚುನಾವಣೆಗೆ ಬೆಂಬಲ ನೀಡುವಂತೆ ಕೇಳುತ್ತೇವೆ. ಪಕ್ಷದ ಹೈಕಮಾಂಡ್ ಎಲ್ಲಿಗೆ ಪ್ರಚಾರಕ್ಕೆ ಹೋಗುವಂತೆ ಸೂಚನೆ ನೀಡುತ್ತದೆಯೋ ಅಲ್ಲಿಗೆ ಹೋಗುತ್ತೇನೆ. ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಪಕ್ಷ ಗೆದ್ದಿತ್ತು ಎಂದರು.

Intro:ಪ್ರಜ್ವಲ್ ರೇವಣ್ಣBody:ಮೈಸೂರು:ಹುಣಸೂರಿನ ಹಿಂದೆ ಶಾಸಕರು ಅವರ ಅನುಕೂಲಕ್ಕಾಗಿ ಕಾರ್ಯಕರ್ತರನ್ನು ನಡುದಾರಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ವಿರುದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದರು.
ಹುಣಸೂರಿನ ಗೌಡಗೆರೆಯಲ್ಲಿ ಮತಯಾಚನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಹುಣಸೂರಿನಲ್ಲಿ ಹಿಂದಿನ ಶಾಸಕರು ತಮ್ಮ ಅನುಕೂಲತೆಗಾಗಿ ಪಕ್ಷ ತೊರೆದಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಪಕ್ಷಬಿಟ್ಟರು ವಿನಹಃ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ನಮ್ಮನ್ನು ಬಿಟ್ಟಿಲ್ಲ. ರಾಜಕೀಯ ಕಿಚ್ಚು ತೋರಿಸಲು ಕಾರ್ಯಕರ್ತರಿಗೆ ಹೇಳಲಾಗಿದೆ.  ಶ್ರಮ ಹಾಕಿ ಜಯಭೇರಿ ಬಾರಿಸುತ್ತೀವಿ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೀನಿ ಅವರ ಸಮಯ ಕೇಳಿ ಮನೆಗೆ ಭೇಟಿ ನೀಡಿ ಉಪಚುನಾವಣೆಗೆ ಬೆಂಬಲ ನೀಡುವಂತೆ ಕೇಳಿತ್ತೀನಿ.ಪಕ್ಷದ ಹೈಕಮಾಂಡ್ ಎಲ್ಲಿಗೆ ಪ್ರಚಾರಕ್ಕೆ ಹೋಗುವಂತೆ ಸೂಚನೆ ನೀಡುತ್ತೆ ಅಲ್ಲಿಗೆ ಹೋಗುತ್ತೀನಿ. ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಪಕ್ಷ ಗೆದ್ದಿತ್ತು. ಈ ಉಪಚುನಾವಣೆಯಲ್ಲಿ ಕಾರ್ಯಕರ್ತ ಹೋರಾಟವಿದೆ ಎಂದರು. Conclusion:ಪ್ರಜ್ವಲ್ ರೇವಣ್ಣ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.