ETV Bharat / state

ಮೈಸೂರು ರೈಲ್ವೆ ಕ್ವಾರ್ಟರ್ಸ್​​​ನಲ್ಲಿ ಕ್ಲೋರಿನ್‌ ಅನಿಲ ಸೋರಿಕೆ: ಮಕ್ಕಳು ಸೇರಿ 40 ಮಂದಿ ಅಸ್ವಸ್ಥ

ಮೈಸೂರಿನ ಯಾದವಗಿರಿಯಲ್ಲಿರುವ ರೈಲ್ವೆ ವಸತಿ ಗೃಹದಲ್ಲಿ ಕ್ಲೋರಿನ್ ಅನಿಲ ಲೀಕ್ ಆಗಿದೆ. ಪರಿಣಾಮ ಮಕ್ಕಳನ್ನು ಸೇರಿದಂತೆ 40 ಮಂದಿ ಅಸ್ವಸ್ಥರಾಗಿದ್ದಾರೆ.

Chlorination leaking in Mysore railway quarters
ಮೈಸೂರು ರೈಲ್ವೆ ಕ್ವಾಟರ್ಸ್​​​ನಲ್ಲಿ ಕ್ಲೋರಿನೇಷನ್ ಲೀಕ್
author img

By

Published : Mar 7, 2022, 7:24 PM IST

Updated : Mar 7, 2022, 9:57 PM IST

ಮೈಸೂರು: ಯಾದವಗಿರಿಯಲ್ಲಿರುವ ರೈಲ್ವೆ ಕ್ವಾರ್ಟರ್ಸ್​​​​​​ನಲ್ಲಿ ಕ್ಲೋರಿನ್‌ ಅನಿಲ ಸೋರಿಕೆಯಾಗಿದ್ದು, ಮಕ್ಕಳು ಸೇರಿದಂತೆ 40 ಮಂದಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಕ್ಲೋರಿನ್ ಸೋರಿಕೆ ಆಗಿದ್ದು, ರೈಲ್ವೆ ವಸತಿ ಗೃಹದಲ್ಲಿರುವ ಜನರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಈ ಸಂದರ್ಭದಲ್ಲಿ 5 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಆರ್‌ಎಸ್ ರಸ್ತೆಯನ್ನು ಬಂದ್ ಮಾಡಲಾಗಿದ್ದು, ರೈಲ್ವೆ ವಸತಿ ಗೃಹಕ್ಕೆ ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಆಗಮಿಸಿ, ಕ್ಲೋರಿನೇಷನ್ ಮೇಲೆ ನೀರು ಹಾಕಿ ಲೀಕೇಜ್ ಮುಚ್ಚುವ ಕೆಲಸ ಮಾಡುತ್ತಿದ್ದಾರೆ.

MLA Nagendra visited hospital
ಆಸ್ಪತ್ರೆಗೆ ಶಾಸಕ ಎಲ್.ನಾಗೇಂದ್ರ ಭೇಟಿ

ಆಸ್ಪತ್ರೆಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಅಸ್ವಸ್ಥಗೊಂಡಿರುವವರ ಯೋಗಕ್ಷೇಮ ವಿಚಾರಿಸಿ ಬಳಿಕ ಮಾತನಾಡುತ್ತಾ, ದೇವರ ಕೃಪೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಸ್ವಸ್ಥಗೊಂಡವರಿಗೆ ಜಾಗರೂಕತೆಯಿಂದ ಚಿಕಿತ್ಸೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

MLA Nagendra visited hospital
ಆಸ್ಪತ್ರೆಗೆ ಶಾಸಕ ಎಲ್.ನಾಗೇಂದ್ರ ಭೇಟಿ

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

Last Updated : Mar 7, 2022, 9:57 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.