ಮೈಸೂರು: ಯೋಗ ದಿನಾಚರಣೆಯ ವೇದಿಕೆಯಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ಇರುತ್ತದೆ. ನಾವೆಲ್ಲಾ ವೇದಿಕೆಯ ಕೆಳಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳೂ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನನ್ನ ಮತ್ತು ರಾಮದಾಸ್ ನಡುವೆ ಈ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಯುತ್ತಿಲ್ಲ. ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನರಿಗೆ ಅವಕಾಶವಿದೆ. ಒಟ್ಟಾರೆ ಅರಮನೆಯ ಎಲ್ಲಾ ಭಾಗವೂ ಸೇರಿ 15 ಸಾವಿರ ಜನರಿಗೆ ಅವಕಾಶವಾಗಬಹುದು. ಆದರೆ ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ. ಈಗಾಗಲೇ ಮೋದಿಯವರ ಜೊತೆ ಯೋಗ ಮಾಡಲು ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶವಿದೆ ಎಂದರು.
ಸ್ವಾಗತದ ಬ್ಯಾನರ್ ಬೇಡ: ಮೈಸೂರಿನಲ್ಲಿ ಬಹಳಷ್ಟು ಕಡೆ ಪಾಲಿಕೆಯ ಕ್ಯಾಂಟೀಲಿವರ್ ಹಾಗೂ ಬೋರ್ಡಿಂಗ್ಗಳಿವೆ. ಅದನ್ನು ಬಿಟ್ಟು ಬೇರೆ ಬ್ಯಾನರ್ಗಳನ್ನು ಹಾಕಬಾರದು. ಮೋದಿಯವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಯಾರೂ ಹಾಕಬೇಡಿ. ನಮ್ಮ ಪಕ್ಷದವರೇ ಇರಲಿ, ಸಂಘ ಸಂಸ್ಥೆಗಳೇ ಇರಲಿ. ಯಾವುದೇ ಫ್ಲೆಕ್ಸ್‌ಗಳನ್ನು ಹಾಕಿ ನಗರದ ಸೌಂದರ್ಯ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕಾಶ್ಮೀರದಂತೆ ನಕಲಿ ಗಾಂಧಿ ಕುಟುಂಬಕ್ಕೂ ವಿಶೇಷ ಸವಲತ್ತು ಕೊಡಬೇಕಾ?: ಛಲವಾದಿ ವಾಗ್ದಾಳಿ