ETV Bharat / state

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್.. ಸೋಲನ್ನ ಒಪ್ಪಲ್ಲ, ಗೆಲ್ಲೋದಕ್ಕೂ ಆಗಲ್ಲ.. ಮಾಜಿ ಸಿಎಂ ಕುಕ್ಕಿದ ಹಳ್ಳಿಹಕ್ಕಿ!!

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್. ಸೋಲನ್ನು ಒಪ್ಪಿಕೊಳ್ಳೋದಿಲ್ಲ. ಗೆಲ್ಲೋದಕ್ಕೂ ಆಗೋದಿಲ್ಲ. ಇವರದ್ದು ಒಂಥರಾ ಟ್ರಂಪಾಯಣದ ಕಥೆ. ಸಿದ್ದರಾಮಯ್ಯ ಸೋಲನ್ನ ಒಪ್ಪಿಕೊಳ್ಳೋದಿಲ್ಲ. ಸೋತರೆ ರಾಹುಕೇತುಗಳು ಸೋಲಿಸಿದರು ಅಂತಾರೆ.. ನನ್ನನ್ನ ಬಿಟ್ಟರೆ ಇನ್ಯಾರೂ ಇರಬಾರದು ಅನ್ನೋ ಮನಸ್ಥಿತಿಯವರದ್ದು. ಸಿದ್ದರಾಮಯ್ಯ ಕರ್ನಾಟಕ ಟ್ರಂಪ್ ಇದ್ದಂತೆ. ಹತಾಶೆಯಿಂದ ಚಡಪಡಿಸುತ್ತಿದ್ದಾರೆ..

author img

By

Published : Feb 12, 2021, 11:38 AM IST

Updated : Feb 12, 2021, 1:02 PM IST

MLC H vishwantha slams Siddaramaiah
ಸಿದ್ದರಾಮಯ್ಯರನ್ನ ಲೇವಡಿ ಮಾಡಿದ ಎಚ್. ವಿಶ್ವನಾಥ್

ಮೈಸೂರು : ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೋಡಿದ ಕೂಡಲೇ ಅವರಿಗೆ ಸಿಎಂ ಮಿಠಾಯಿ ನೆನಪಾಗುತ್ತದೆ. ಅದ‌ನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗೆ. ಹೀಗಾಗಿ, ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಮಾಜಿ ಸಿಎಂ ಕುಕ್ಕಿದ ಹಳ್ಳಿಹಕ್ಕಿ..

ರಾಜ್ಯದಲ್ಲಿ ಸಿದ್ದರಾಮಯ್ಯರಿಂದ ಅಹಿಂದ ಹೋರಾಟ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವರು, ಇದು ಯಾವ ಅಹಿಂದ ಹೋರಾಟವೂ ಅಲ್ಲ. ಇದು ಸಿದ್ದರಾಮಯ್ಯ ಹಾಗೂ ಮಹದವೇಪ್ಪ ಅವರ ಸ್ವಾರ್ಥದ ಹೋರಾಟ. ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಅವರಿಗೆ ಅಸ್ತಿತ್ವದ ಅಭದ್ರತೆ ಕಾಡುತ್ತಿದೆ. ಕುರುಬ ಸಮಾಜದ ಎಸ್‌ಟಿ ಹೋರಾಟ ಅವರಿಲ್ಲದೆ ಯಶಸ್ವಿಯಾಗಿದೆ.

ಲಕ್ಷಾಂತರ ಜನರು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ಎಂದು ಕೊಂಡಿದ್ದರು. ಅವರಲ್ಲಿ ನಾನು, ನಾನು ಅನ್ನೋ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ ಎಂದು ಕುಟುಕಿದರು.

ಡಿ ಕೆ ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ. ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದು ಏಕಾಂಗಿಯಾಗುತ್ತಿದ್ದಾರೆ. ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ. ಯಾವ ಹೋರಾಟ ಮಾಡುತ್ತೀರಾ? ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು, ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ.

ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರರನ್ನು ಬಿಟ್ಟು ಹಿಂದು ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಮುಸ್ಲಿಮರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಓದಿ : ರಾಜ್ಯಸಭೆ ಪ್ರತಿಪಕ್ಷ ನಾಯಕರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ.. ಪಕ್ಷ ನಿಷ್ಠೆಗೆ ಮತ್ತೊಂದು ಪದವಿ ಪಕ್ಕಾ..

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್. ಸೋಲನ್ನು ಒಪ್ಪಿಕೊಳ್ಳೋದಿಲ್ಲ. ಗೆಲ್ಲೋದಕ್ಕೂ ಆಗೋದಿಲ್ಲ. ಇವರದ್ದು ಒಂಥರಾ ಟ್ರಂಪಾಯಣದ ಕಥೆ. ಸಿದ್ದರಾಮಯ್ಯ ಸೋಲನ್ನ ಒಪ್ಪಿಕೊಳ್ಳೋದಿಲ್ಲ. ಸೋತರೆ ರಾಹುಕೇತುಗಳು ಸೋಲಿಸಿದರು ಅಂತಾರೆ.. ನನ್ನನ್ನ ಬಿಟ್ಟರೆ ಇನ್ಯಾರೂ ಇರಬಾರದು ಅನ್ನೋ ಮನಸ್ಥಿತಿಯವರದ್ದು. ಸಿದ್ದರಾಮಯ್ಯ ಕರ್ನಾಟಕ ಟ್ರಂಪ್ ಇದ್ದಂತೆ. ಹತಾಶೆಯಿಂದ ಚಡಪಡಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ರಾಜಕೀಯ ಚಡಪಡಿಕೆ ಶುರುವಾಗಿದೆ ಎಂದು ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದರು.

Last Updated : Feb 12, 2021, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.