ಮೈಸೂರು : ಬೆಂಗಳೂರು ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ನ ದೊಡ್ಡ ಮಟ್ಟದ ಇಂಡಸ್ಟ್ರಿಯೇ ಇದೆ. ಈಗ ಅದು ಇನ್ನೂ ಹೆಚ್ಚಾಗಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಂತಾನೇ ಏನೂ ಇಲ್ಲ, ಬೆಂಗಳೂರು ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ನ ದೊಡ್ಡ ಮಟ್ಟದ ಇಂಡಸ್ಟ್ರಿಯೇ ಇದೆ. ಈಗಂತೂ ಅದು ಹೆಚ್ಚಾಗಿದೆ. ನಾವು ಬೆಂಗಳೂರು ಕಮಿಷನರ್ ಭೇಟಿ ಮಾಡಿ ಡ್ರಗ್ಸ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ವೈಯಕ್ತಿಕವಾಗಿ ಒತ್ತಾಯ ಮಾಡಿದ್ದೇನೆ ಎಂದಿದ್ದಾರೆ.
ಇದರಿಂದ ದೇಶದ ಮಕ್ಕಳು ಡ್ರಗ್ಸ್ನಿಂದ ಬಲಿಯಾಗುತ್ತಿದ್ದಾರೆ. ನಾವೆಲ್ಲಾ ಬದುಕಿದ್ದರೇನು, ಸತ್ತರೇನು ಆ ಮಟ್ಟಕ್ಕೆ ನಾವು ಯೋಚನೆ ಮಾಡಬೇಕು. ಸರ್ಕಾರ ಡ್ರಗ್ಸ್ನ ಕಂಟ್ರೋಲ್ ಮಾಡಬೇಕು ಎಂದರು.
ಪೊಲೀಸ್ ಗಮನಕ್ಕೆ ಇಲ್ಲದೆ ಯಾವ ದಂಧೆಯೂ ನಡೆಯುವುದಿಲ್ಲ, ಪೊಲೀಸರು ಸೀರಿಯಸ್ ಆಗಿ ಡ್ರಗ್ಸ್ ಇರಬಾರದೆಂದು ನಿರ್ಧಾರ ಮಾಡಿ ಬಿಟ್ಟರೆ ಡ್ರಗ್ಸ್ ಸಮಸ್ಯೆ ಇರುವುದಿಲ್ಲ ಎಂದರು.