ETV Bharat / state

ಗುಂಬಜ್ ಯಾವುದೇ ಧರ್ಮದ ಆಧಾರದ ವಿನ್ಯಾಸವಲ್ಲ, ಗುತ್ತಿಗೆದಾರ ಮುಸ್ಲಿಂನಲ್ಲ: ಬಿಜೆಪಿ ಶಾಸಕ ರಾಮದಾಸ್ ಸ್ಪಷ್ಟನೆ - ಪೊಲೀಸ್ ಕಮಿಷನರ್​ಗೆ ದೂರು

ಮೈಸೂರಿನಲ್ಲಿ ತಂಗುದಾಣವನ್ನು ಮಸೀದಿ ರೀತಿಯಲ್ಲಿ ಕಾಮಗಾರಿ ಮಾಡಿರುತ್ತಾರೆ ಎಂಬ ಗಾಳಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವ ಹುನ್ನಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಈ ಕುರಿತು ಮೈಸೂರು ನಗರದ ಪೊಲೀಸ್ ಕಮಿಷನರ್​ಗೆ ಪತ್ರದ ಮೂಲಕ ದೂರು ನೀಡಲಾಗಿದೆ ಎಂದು ಶಾಸಕ ಬಿಜೆಪಿ ರಾಮದಾಸ್ ತಿಳಿಸಿದ್ದಾರೆ.

mla-ramdas-clarified-about-bus-stops-gumbaz-design-issue-in-mysuru
ಗುಂಬಜ್ ಯಾವುದೇ ಧರ್ಮದ ಆಧಾರದ ವಿನ್ಯಾಸವಲ್ಲ, ಗುತ್ತಿಗೆದಾರ ಮುಸ್ಲಿಂನಲ್ಲ: ಬಿಜೆಪಿ ಶಾಸಕ ರಾಮದಾಸ್ ಸ್ಪಷ್ಟನೆ
author img

By

Published : Nov 15, 2022, 10:50 PM IST

Updated : Nov 16, 2022, 11:01 AM IST

ಮೈಸೂರು: ಮೈಸೂರು ನಗರದ ಪಾರಂಪರಿಕ ಮಹತ್ವದ ಹಿನ್ನೆಲೆಯಲ್ಲಿ ತಂಗುದಾಣ ವಿನ್ಯಾಸಗೊಳಿಸಲಾಗಿದೆಯೇ ಹೊರತು ಯಾವುದೇ ಧರ್ಮದ ಆಧಾರದ ಮೇಲಲ್ಲ. ಇದನ್ನು ಮುಸ್ಲಿಂ ಗುತ್ತಿಗೆದಾರ ನಿರ್ಮಿಸಿದ್ದಾನೆ ಎಂಬುದು ಸುಳ್ಳು ಎಂದು ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ. ತಂಗುದಾಣ ವಿನ್ಯಾಸಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರಾಮದಾಸ್ ಈ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ಪಾರಂಪರಿಕ ನಗರ, ಇದರ ಮಹತ್ವವನ್ನು ಸಾರುವ ದೃಷ್ಠಿಯಲ್ಲಿ ಬಸ್ ತಂಗುದಾಣಗಳನ್ನು ಅರಮನೆ ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಿ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ.

ಬೆಂಗಳೂರು-ಊಟಿ ರಸ್ತೆ ಜೆ.ಎಸ್.ಎಸ್. ಕಾಲೇಜು ಬಳಿಯಲ್ಲಿ ಬಸ್ ತಂಗುದಾಣವನ್ನು ಅರಮನೆ ಮಾದರಿಯಲ್ಲಿ ವಿನ್ಯಾಸ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಶೇ.60ರಷ್ಟು ಕಾಮಗಾರಿ ಮುಗಿಸಲಾಗಿದ್ದು, ಕಾಮಗಾರಿ ಇನ್ನು ಪ್ರಗತಿಯಲ್ಲಿದೆ. ಮೈಸೂರಿನ ಪಾರಂಪರಿಕತೆ ತೋರಿಸುವ ದೃಷ್ಠಿಯಲ್ಲಿ ಅರಮನೆಯ ಮಾದರಿಯಲ್ಲಿರುವ ಬಸ್ ತಂಗುದಾಣವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್​ಗೆ ದೂರು: ತಂಗುದಾಣ ವಿನ್ಯಾಸವನ್ನು ಮಸೀದಿ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಈ ಕಾಮಗಾರಿಯ ಗುತ್ತಿಗೆಗಾರ ಒಬ್ಬ ಮುಸಲ್ಮಾನರಾಗಿದ್ದು, ಇವನು ಮಸೀದಿ ರೀತಿಯಲ್ಲಿ ಕಾಮಗಾರಿ ಮಾಡಿರುತ್ತಾನೆ ಎಂಬ ಗಾಳಿಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುವ ಹುನ್ನಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಈ ಕುರಿತು ಮೈಸೂರು ನಗರದ ಪೊಲೀಸ್ ಕಮಿಷನರ್​ಗೆ ಪತ್ರದ ಮೂಲಕ ದೂರು ನೀಡಿ ಸೂಕ್ತ ಕ್ರಮವಹಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಈಗಾಗಲೇ ಹಲವಾರು ಸ್ಥಳಗಳಲ್ಲೂ ಇದೇ ಮಾದರಿಯ ಬಸ್ ತಂಗುದಾಣ ನಿರ್ಮಾಣವಾಗಿದೆ. ಅದರ ವಿನ್ಯಾಸದ ಆದಾರದ ಮೇಲೆ ನಮ್ಮ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸದೊಂದಿಗೆ ಬಸ್ ತಂಗುಂದಾಣವನ್ನು ನಿರ್ಮಿಸಲಾಗುವುದು, ಬಸ್ ತಂಗುದಾಣದ ಕಾಮಗಾರಿಯನ್ನು ಗುತ್ತಿಗೆದಾರ ಮಹದೇವ್ ಎಂಬುವವರು ದಂತ ಕನ್​​ಸ್ಟ್ರಕ್ಷನ್​​ ಎಂಬ ಹೆಸರಿನಲ್ಲಿ ನಿರ್ಮಿಸುತಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದು ತಂಗುದಾಣದ ಒಳಗೆ ಎಲ್​ಇಡಿ ಸ್ಟೀನ್ ಕೂಡ ಅಳವಡಿಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿಶೇಷವಾಗಿ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಸಂಸದರು ಹೇಳಿಕೆ ನೀಡಿದ ನಂತರ ರಾತ್ರೋರಾತ್ರಿ ಕಳಶ ಅಳವಡಿಸಲಾಗಿದೆ ಎಂದು ಸುದ್ದಿ ಬಂದಿದೆ. ವಾಸ್ತವಾಂಶ ಕಳೆದ ವಾರವೇ ಅದನ್ನು ಅಳವಡಿಸಲಾಗಿರುತ್ತದೆ. ಅರಮನೆ ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಿಸಲು, ವಿನ್ಯಾಸವನ್ನು ಈಗಾಗಲೇ ಮೈಸೂರಿನ ಹಲವಾರು ಕಡೆ ಇರುವಂತಹ ರೀತಿಯಲ್ಲಿ ತಯಾರಿಸಲಾಗಿದ್ದು, ಈ ವಿನ್ಯಾಸದಿಂದ ವಿವಾದಗಳಾಗಲಿದೆ ಎಂದು ಕಂಡು ಬಂದಲ್ಲಿ ಒಂದು ತಜ್ಞರ ಸಮಿತಿಯನ್ನು ರಚನೆ ಮಾಡಿ, ಸಮಿತಿಯವರು ಬಂದು ನೋಡಿ ವರದಿ ನೀಡಲು ಮನವಿ ಮಾಡಲಾಗಿದೆ. ಸಮಿತಿಯ ವರದಿಯಲ್ಲಿ ತಪ್ಪಿದೆ ಎಂದು ತಿಳಿಸಿದ್ದಲ್ಲಿ ಬದಲಾವಣೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಬಸ್​ ನಿಲ್ದಾಣದ ಗುಂಬಜ್​ಗಳನ್ನು ನಾನೇ ಜೆಸಿಬಿಯಿಂದ ಒಡೆದು ಹಾಕುತ್ತೇನೆ: ಸಂಸದ ಪ್ರತಾಪ್ ಸಿಂಹ

Last Updated : Nov 16, 2022, 11:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.