ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರು ಹತ್ತಿದ ಹುಣಸೂರು ಶಾಸಕ ಹೆಚ್. ಪಿ ಮಂಜುನಾಥ್ ಅವರು ಹುಣಸೂರಿನ ಪ್ರವಾಹದ ಹಾನಿ ವಿವರಿಸಿದರು.
ಮೈಸೂರಿನಿಂದ ಕೊಡಗು ಜಿಲ್ಲೆಗೆ ತೆರಳುತ್ತಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಹುಣಸೂರಿನಲ್ಲಿ ಶಾಸಕ ಮಂಜುನಾಥ್ ಅವರು ಭೇಟಿಯಾದರು. ನಂತರ ಪ್ರಕೃತಿ ವಿಕೋಪದಡಿ ಹುಣಸೂರು ತಾಲೂಕಿಗೆ ಹೆಚ್ಚಿನ ಪರಿಹಾರ ಹಾಗೂ ವಿವಿಧ ಇಲಾಖೆಗಳಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.
ಹುಣಸೂರಿನಿಂದ ಕುಶಾಲನಗರದವರೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿ ಮುಖ್ಯಮಂತ್ರಿಗಳೊಂದಿಗೆ ತಾಲೂಕಿನಲ್ಲಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ವಸತಿ, ಕೃಷಿ, ನೀರಾವರಿ ಬಗ್ಗೆ ಮಾಹಿತಿ ನೀಡಿದರು.
ಓದಿ: ದಾವಣಗೆರೆಯಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ - ಜನಜೀವನ ಅಸ್ತವ್ಯಸ್ತ!