ETV Bharat / state

ಹುಣಸೂರು ಕೋವಿಡ್ ಆಸ್ಪತ್ರೆಗೆ ಶಾಸಕ ಹೆಚ್. ಪಿ. ಮಂಜುನಾಥ್ ಭೇಟಿ, ಪರಿಶೀಲನೆ

ಹುಣಸೂರು ಕೋವಿಡ್ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಸ್ಥಳಕ್ಕೆ ಶಾಸಕ ಹೆಚ್.ಪಿ. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.

MLA H. P. Manjunath visits Kovid Hospital, inspection
ಹುಣಸೂರು ಕೋವಿಡ್ ಆಸ್ಪತ್ರೆಗೆ ಶಾಸಕ ಹೆಚ್. ಪಿ. ಮಂಜುನಾಥ್ ಭೇಟಿ, ಪರಿಶೀಲನೆ
author img

By

Published : Aug 5, 2020, 2:05 PM IST

ಮೈಸೂರು: ಹುಣಸೂರು ಕೋವಿಡ್ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಸ್ಥಳಕ್ಕೆ ಕ್ಷೇತ್ರದ ಶಾಸಕ ಹೆಚ್.ಪಿ. ಮಂಜುನಾಥ್ ಭೇಟಿ ನೀಡಿದ್ದರು.

ಹುಣಸೂರು ಕೋವಿಡ್ ಆಸ್ಪತ್ರೆಗೆ ಶಾಸಕ ಹೆಚ್. ಪಿ. ಮಂಜುನಾಥ್ ಭೇಟಿ, ಪರಿಶೀಲನೆ

ಹುಣಸೂರಿನ ಹೊರವಲಯದ ಬಾಚಳ್ಳಿ ರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಕಾಂಗ್ರೆಸ್ ಶಾಸಕ ಹೆಚ್. ಪಿ. ಮಂಜುನಾಥ್ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ದಾಖಲಾಗಿದ್ದ ಸೋಂಕಿತರು, ಇಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಶುಚಿಯಾಗಿಲ್ಲ. ಊಟದ ವ್ಯವಸ್ಥೆ ಇಲ್ಲ. ರೋಗಕ್ಕೆ ಸರಿಯಾಗಿ ಔಷಧಿ ನೀಡುತ್ತಿಲ್ಲ ಹಾಗೂ ಆಸ್ಪತ್ರೆಯಲ್ಲಿ ಮಹಿಳೆಯರಿಗೂ ಪುರುಷರಿಗೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲವೆಂದು ಶಾಸಕರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಸಮಸ್ಯೆ ಪರಿಶೀಲಿಸಿದ ಶಾಸಕರು ತಕ್ಷಣ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಇಲ್ಲಿನ ಸಮಸ್ಯೆಗಳನ್ನು ತಿಳಿಸಿದರು. ಜೊತೆಗೆ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಸೋಂಕಿತರಿಗೆ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.