ಮೈಸೂರು: ಕುಮಾರಸ್ವಾಮಿ ಅವರ ನಿಲುವಿಗೆ ಸ್ವಾಗತ ಬಯಸುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಪಕ್ಷ ವಿರೋಧಿ ಚಟುವಟಿಕೆಗೆ ಉಚ್ಛಾಟನೆ ಮೈಸೂರಿನಿಂದ ಆರಂಭ ಎಂಬ ಹೆಚ್ಡಿಕೆ ಹೇಳಿಕೆಗೆ ಸ್ವಾಗತ ಬಯಸಿದ ಜಿಟಿಡಿ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಬದ್ಧ ಎಂದಿದ್ದಾರೆ.
ನಾನು ಬಿಜೆಪಿಯಲ್ಲಿದ್ದಾಗಲೂ ಶಿಸ್ತಿನಿ ಸಿಪಾಯಿ:
ಜೆಡಿಎಸ್‌ನಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿಲ್ಲ. ಇನ್ನೊಂದು ಪಕ್ಷ ಗೆಲ್ಲಿಸಲು ವೀಕ್ ಕ್ಯಾಂಡಿಟೇಟ್‌ಗೆ ಟಿಕೆಟ್ ಕೊಡಿಸಿಲ್ಲ. ವೀಕ್ ಕ್ಯಾಂಡಿಡೇಟ್ ಹಾಕಿಸಿದವರ ವಿರುದ್ದ ಕ್ರಮ ಜರುಗಿಸಬೇಕಲ್ಲವೆ? ಪಕ್ಷಕ್ಕೆ ದ್ರೋಹ ಮಾಡಿಲ್ಲ. ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಪರೋಕ್ಷವಾಗಿ ಸಾ.ರಾ. ಮಹೇಶ್ ವಿರುದ್ದ ಗುಡುಗಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಬಗ್ಗೆ ಕಾಲಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುತ್ತಾರೆ ಅಂತ ಅಷ್ಟೇ ಹೇಳಿದ್ದೇನೆ. ಈ ದೇವೆಗೌಡರ ಬಗ್ಗೆ, ರೇವಣ್ಣ ಬಗ್ಗೆ, ನಿಮ್ಮ ಬಗ್ಗೆ ಅಥವಾ ಜೆಡಿಎಸ್ ಬಗ್ಗೆ ಮಾತನಾಡಿದ್ದೇನಾ. ಸುಮ್ನೆ ನನ್ನ ಯಾಕೆ ಟಾರ್ಗೆಟ್ ಮಾಡ್ತೀರಿ? ನನ್ನನ್ನ ಪಕ್ಷದಿಂದ ಉಚ್ಚಾಟನೆ ಮಾಡುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ನನ್ನ ವಿರುದ್ದ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರ ಇದೆ. ಇವತ್ತಿನ ಸಭೆಗೆ ನಾನು ಹೋಗೋಕೆ ಆಗಿಲ್ಲ. ಸಭೆ ಯಶಸ್ವಿಯಾಗಲಿ, ಶುಭ ಹಾರೈಸುತ್ತೇನೆ ಎಂದರು.
ಓದಿ: ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಮತ್ತು ಹೆಚ್ಡಿಕೆ ಕಾರಣ: ಜಿ.ಟಿ. ದೇವೇಗೌಡ
ಮೈಸೂರು ಹೈಕಮಾಂಡ್ ಎನ್ನುತ್ತಲೇ ಶಾಸಕ ಸಾ.ರಾ. ಮಹೇಶ್ ವಿರುದ್ದ ವಾಗ್ದಾಳಿ ನಡೆಸಿದ ಜಿ.ಟಿ. ದೇವೇಗೌಡ, ಮೈಸೂರು ಹೈಕಮಾಂಡ್ ಪ್ರಜ್ವಲ್ ಅವರನ್ನು ನಾನೇ ಹುಣಸೂರಿಗೆ ಕರೆದುಕೊಂಡು ಬಂದಿದ್ದು ಅಂತಾರೆ. ವಿಶ್ವನಾಥ್‌ನ ಪಾರ್ಟಿಗೆ ಕರೆ ತಂದಿದ್ದು ನಾನೇ ಅಂತಾರೆ. ಕೆ.ಆರ್. ನಗರ ಶಾಸಕರು ಮೈಸೂರು ಹೈಕಮಾಂಡ್. ಹುಣಸೂರಿನಲ್ಲಿ ನನ್ನ ಮಗ ಹರೀಶ್‌ಗೌಡ ಗೆದ್ದು ಎಂಎಲ್‌ಎ ಆಗ್ತಾನೆ ಅಂತ ವೀಕ್ ಕ್ಯಾಂಡಿಡೇಟ್‌ಗೆ ಟಿಕೆಟ್ ಕೊಡಿಸಿದ್ರು ಎಂದು ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು.