ಮೈಸೂರು: ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಸಹಕಾರ ಹಾಗೂ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು 2.2 ಲಕ್ಷ ರೂ. ದೇಣಿಗೆ ನೀಡಿದರು.
ಯಶವಂತಪುರ ಕ್ಷೇತ್ರದ ಶಾರದಾ ಜ್ಞಾನಾಕ್ಷಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೀಡಿದ 2 ಲಕ್ಷ 2 ಸಾವಿರ ರೂಪಾಯಿ ದೇಣಿಗೆ ಚೆಕ್ ಅನ್ನು ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಸಂಘದ ಅಧ್ಯಕ್ಷರಾದ ದೊಡ್ಡ ಅರಸಿನಕೆರೆ ಪ್ರೊ. ಮಾಯಪ್ಪ ಅವರ ಮುಖಾಂತರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು.
ಈ ಮೂಲಕ ಮೃಗಾಲಯಕ್ಕೆ ಒಟ್ಟು 3 ಕೋಟಿ 50 ಲಕ್ಷದ 2 ಸಾವಿರ ರೂಪಾಯಿ ದೇಣಿಗೆಯನ್ನು ಹಸ್ತಾಂತರಿಸಿದಂತಾಗಿದೆ.