ETV Bharat / bharat

ಹೆಚ್ಚುತ್ತಿರುವ ತಾಪಮಾನ: 24 ಗಂಟೆಯಲ್ಲಿ ಒಡಿಶಾದಲ್ಲಿ 42 ಕಾಳ್ಗಿಚ್ಚಿನ ಘಟನೆಗಳು ವರದಿ - FOREST FIRES SPREAD IN ODISHA

ಹೆಚ್ಚುತ್ತಿರುವ ತಾಪಮಾನಗಳು, ಮಾನವ ನಿರ್ಲಕ್ಷ್ಯಗಳು ಅರಣ್ಯದಲ್ಲಿ ಕಾಳ್ಗಿಚ್ಚಿನ ಪ್ರಕರಣದ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಚಿತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

forest-fires-spread-in-odisha-as-experts-stress-preparedness-and-awareness
ಕಾಳ್ಗಿಚ್ಚು (ಈಟಿವಿ ಭಾರತ್​​)
author img

By ETV Bharat Karnataka Team

Published : Jan 25, 2025, 3:54 PM IST

ಭುವನೇಶ್ವರ್, ಒಡಿಶಾ​: ಜನವರಿ ಅಂತ್ಯವಾಗುತ್ತಿದ್ದಂತೆ, ಇದೀಗ ನಿಧಾನವಾಗಿ ತಾಪಮಾನದಲ್ಲಿ ಏರಿಕೆ ಕೂಡ ಕಂಡು ಬಂದಿದ್ದು, ರಾಜ್ಯದ ಅರಣ್ಯಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕಳೆದ ಕೆಲವು ದಿನಗಳಿಂದ ಅರಣ್ಯದಲ್ಲಿ ಬೆಂಕಿಯಂತಹ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿದ್ದು, ಒಡಿಶಾ ಕೂಡ ಇದಕ್ಕೆ ಹೊರತಾಗಿಲ್ಲ.

ಭಾರತದ ಅರಣ್ಯ ಸರ್ವೇಕ್ಷಣೆಯ ಪ್ರಕಾರ, ಕಳೆದೊಂದು ವಾರದಿಂದ ಅರಣ್ಯದಲ್ಲಿ ಬೆಂಕಿ ಪ್ರಕರಣದಲ್ಲಿ ಒಡಿಶಾ ಮೂರನೇ ಸ್ಥಾನ ಪಡೆದಿದೆ. ಕಳೆದ 24 ಗಂಟೆಯಲ್ಲೇ ಸ್ಯಾಟಲೈಟ್​ ದತ್ತಾಂಶಗಳ ಪ್ರಕಾರ, ಒಡಿಶಾದಲ್ಲಿ 42 ಅಗ್ನಿ ಅನಾಹುತಗಳು ಸಂಭವಿಸಿವೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕವಿದ್ದು, ಎರಡನೇ ಸ್ಥಾನದಲ್ಲಿ ನಾಗಲ್ಯಾಂಡ್​ ಮತ್ತು ಮೂರನೇ ಸ್ಥಾನದಲ್ಲಿ ಒಡಿಶಾ ಇದೆ.

forest-fires-spread-in-odisha-as-experts-stress-preparedness-and-awareness
ಕಳೆದ 7 ದಿನಗಳಲ್ಲಿ ರಾಜ್ಯಗಳಲ್ಲಿ ಕಾಳ್ಗಿಚ್ಚಿನ ವರದಿ (ಈಟಿವಿ ಭಾರತ್​)

ಈ ಘಟನೆಗಳ ಕುರಿತು ಆತಂಕ ವ್ಯಕ್ತಪಡಿಸಿರುವ ಪರಿಸರ ತಜ್ಞ ಜಯಕೃಷ್ಣ ಪನಿಗ್ರಹಿ, ಈ ಕುರಿತು ಅರಿವು ನೀಡುವ ಜೊತೆಗೆ ತತ್​​ಕ್ಷಣದ ಕ್ರಮಕ್ಕೆ ಮತ್ತು ಸಿದ್ಧತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಒಡಿಶಾದ ಅರಣ್ಯ ಬೆಂಕಿ ಪ್ರಕರಣಗಳು ಒಣ ಎಲೆ ಮತ್ತು ಮರಗಳಿಂದ ಹೆಚ್ಚು ತೀವ್ರವಾಗುತ್ತದೆ. ಅರಣ್ಯ ಸಮೀಪದಲ್ಲಿರುವ ಗ್ರಾಮಗಳಲ್ಲಿ ಇವುಗಳನ್ನು ತಡೆಯುವ ಜಾಗೃತಿ ಮತ್ತು ಕಟ್ಟುನಿಟ್ಟಿನ ಕ್ರಮ ನಡೆಸುವ ಮೂಲಕ ಇವುಗಳ ತಡೆಗೆ ಮುಂದಾಗಬೇಕಿದೆ.

ಕಾಳ್ಗಿಚ್ಚಿನ ಪರಿಣಾಮ: ಕಾಳ್ಗಿಚ್ಚುಗಳು ಪರಿಣಾಮಗಳು ಬೇಸಿಗೆಯಲ್ಲಿ ಅಗಾಧ ಪ್ರಮಾಣದಲ್ಲಿರುತ್ತದೆ. ಇವು ಕೇವಲ ಮರಗಳನ್ನು ಮಾತ್ರ ಹಾನಿ ಮಾಡುವುದಿಲ್ಲ. ಇದರಿಂದ ವನ್ಯ ಜೀವಿಗಳ ಮೇಲೆ ಪರಿಣಾಮ ಬೀರುವ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ವನ್ಯಜೀವಿ ಸಂರಕ್ಷಕ ಮತ್ತು ತಜ್ಞ ಅದಿತ್ಯ ಪಂಡಾ ಪ್ರಕಾರ, ಮಾನವರು ಈ ಕಾಳ್ಗಿಚ್ಚಿಗೆ ಪ್ರಮುಖ ಕಾರಣವಾಗಿದೆ. ಸಿಗರೇಟ್​ ತುಂಡಿನ ಬೆಂಕಿಯು ದೊಡ್ಡ ಪ್ರಮಾಣದ ಕಾಳ್ಗಿಚ್ಚಿಗೆ ಕಾರಣವಾಗುತ್ತದೆ. ಹಾಗೇ ಒಣಗಿದ ಕೊಂಬೆಗಳ ನಡುವೆ ನಡೆಯುವ ಘರ್ಷಣೆಗಳು ಕೂಡ ಕಾಳ್ಗಿಚ್ಚಿನ ಕಿಡಿ ಹೊತ್ತಿಸುತ್ತದೆ. ಸಾಮಾನ್ಯವಾಗಿ ಸ್ಥಳೀಯರು ಬೇಸಿಗೆ ಆರಂಭದಲ್ಲೇ ಅಗ್ನಿ ನಿಯಂತ್ರಣಕ್ಕೆ ಸಿದ್ಧತೆ ನಡೆಸುತ್ತಾರೆ. ಆದರೆ ಇದು ಕೂಡ ಜಾಗೃತಿ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ.

ಈ ಕಾಳ್ಗಿಚ್ಚಿನ ತಡೆಗೆ ರಾಜ್ಯ ಸರ್ಕಾರ ಕಳೆದ ವರ್ಷ ಟಾಸ್ಕ್​ ಪೋರ್ಸ್​ ರಚಿಸುವ ಮೂಲಕ ನಿರ್ವಹಣಾ ಪ್ರಯತ್ನ ನಡೆಸಿತ್ತು. ಆದಾಗ್ಯೂ, ಇದರ ಪರಿಣಾಮದಲ್ಲಿ ಕೆಲವು ಸವಾಲುಗಳಿವೆ. ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಕಾಳ್ಗಿಚ್ಚು ಸಂಭವಿಸಿದ ಪ್ರದೇಶಕ್ಕೆ ಸರಿಯಾದ ರಸ್ತೆ ಮಾರ್ಗ ಇಲ್ಲದಿರುವ ಹಿನ್ನಲೆ ಅದರ ನಿಯಂತ್ರಣಕ್ಕೆ ತಡೆಯಾಗುತ್ತದೆ. ಕಾಳ್ಗಿಚ್ಚನ್ನು ಸ್ಥಳೀಯರ ಸಹಯೋಗದಿಂದ ಪರಿಣಾಮವಾಗಿ ತಡೆಯಬಹುದಾಗಿದೆ.

ಒಡಿಶಾ ಕಾಳ್ಗಿಚ್ಚಿನ ಹಿನ್ನೋಟ: ಕಳೆದ ಏಳು ದಿನಗಳಿಂ ದೇಶದಲ್ಲಿ ಸಂಭವಿಸುತ್ತಿರುವ ಕಾಳ್ಗಿಚ್ಚಿನಲ್ಲಿ ಒಡಿಶಾ ಮೊದಲ ಸ್ಥಾನದಲ್ಲಿದೆ. ಎಫ್​ಎಸ್​ಐ ದತ್ತಾಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಘಟನೆಗಳನ್ನು ತಡೆಯಬಹುದಾಗಿದೆ. ಜನವರಿಯಿಂದ ಏಪ್ರಿಲ್​ 2020ರ ನಡುವೆ 599 ಜಾಗದಲ್ಲಿ ಈ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದು 2021ರಲ್ಲಿ 2,861ಕಡೆ ಸಂಭವಿಸಿದ್ದು, 2022ರಂದು 319 ಮತ್ತು 2023ರಲ್ಲಿ 1,456 ಘಟನೆ ಸಂಭವಿದೆ.

ಜೀವವೈವಿಧ್ಯತೆಯ ಹಾಟ್​ಸ್ಪಾಟ್​ ಆಗಿರುವ ಸಿಮಿಲಿಪಾಲ್​ನಲ್ಲಿ ಈ ಕಾಳ್ಗಿಚ್ಚಿನ ಹಾನಿ ಹೆಚ್ಚಿದೆ. ಇದರ ಹೊರತಾಗಿ ಕೊರಪುಟ್​, ಸಂಬಲ್ಪುರ್​, ರೆಂಗಲಿ, ಕುಚಿಂಡ, ಬೆಲ್ಪಹಾರ್​, ಬರ್ಗರ್​, ಭವನಿಪಟ್ನಾ, ಅಂಗುಲ್​, ತಲ್ಚೆರ್​ ಮತ್ತು ಕೆಂಡ್ರಪಡ ಪ್ರದೇಶದಲ್ಲಿ ಹೆಚ್ಚಿದೆ.

ತಜ್ಞರು ಎಚ್ಚರಿಸುವಂತೆ ಈ ಕಾಳ್ಗಿಚ್ಚು, ಮುಂದಿನ ತಿಂಗಳಲ್ಲಿ ತಾಪಮಾನ ಹೆಚ್ಚಳದಿಂದ ಹೆಚ್ಚಾಗುವ ಸಂಭವ ಇದೆ ಎಂದಿದ್ದಾರೆ. ಸರ್ಕಾರದ ಕ್ರಮದ ಹೊರತಾಗಿ ಸ್ಥಳೀಯ ಸಮುದಾಯದ ಜೊತೆ ಸಹಯೋಗದೊಂದಿಗೆ ಇವುಗಳನ್ನು ನಿಯಂತ್ರಿಸಬೇಕಿದೆ. ಇದರ ಹೊರತಾಗಿ, ಅಗತ್ಯ ಸಾಧನ ಹೊಂದಿರುವ ಸಿಬ್ಬಂದಿ ಜೊತೆಗೆ ಅಗತ್ಯ ಮೂಲ ಸೌಕರ್ಯ ಹಾಗೂ ರಸ್ತೆ ವ್ಯವಸ್ಥೆಗಳು ಇವುಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಹೆಜ್ಜೆಯಾಗಿದೆ.

ಇದನ್ನೂ ಓದಿ: ಕತ್ರಾದಿಂದ ಶ್ರೀನಗರಕ್ಕೆ ಮೊದಲ ವಂದೇ ಭಾರತ್​​ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ; ಅತ್ಯಂತ ಎತ್ತರದ ಚಿನಾಬ್​ ಸೇತುವೆ ದಾಟಿದ ಟ್ರೈನ್

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಮುನ್ನ ಕಣಿವೆ ರಾಜ್ಯದಲ್ಲಿ ಗುಂಡಿನ ಸದ್ದು; ಸೇನೆ- ಭಯೋತ್ಪಾದಕರ ನಡುವೆ ಎನ್​ಕೌಂಟರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.