ETV Bharat / state

ಮೈಸೂರು ಲೋಕಾಯುಕ್ತ ಪಾರದರ್ಶಕವಾಗಿ ತನಿಖೆ ಮಾಡಿಲ್ಲ, ಸರ್ಕಾರದ ಕೈಗೊಂಬೆಯಾಗಿದೆ: ಹೆಚ್.ವಿಶ್ವನಾಥ್‌‌ - H VISHWANATH ALLEGATION

ಸರ್ಕಾರದಿಂದ ನೇಮಕಗೊಂಡು ಅಧಿಕಾರಕ್ಕೆ ಬಂದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್​. ವಿಶ್ವನಾಥ್​ ಆರೋಪಿಸಿದ್ದಾರೆ.​

MLC H Vishwanath
ವಿಧಾನಪರಿಸತ್​ ಸದಸ್ಯ ಹೆಚ್​.ವಿಶ್ವನಾಥ್​ (ETV Bharat)
author img

By ETV Bharat Karnataka Team

Published : Jan 25, 2025, 3:58 PM IST

Updated : Jan 25, 2025, 5:25 PM IST

ಮೈಸೂರು: "ಮುಡಾ 50:50 ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಕ್ಲೀನ್‌ ಚಿಟ್‌ ನೀಡಲು ಲೋಕಾಯುಕ್ತ ಯಾರು? ಲೋಕಾಯುಕ್ತ ಡಿಜಿ ಹಾಗೂ ಪೊಲೀಸರನ್ನು ನೇಮಕ ಮಾಡುವುದು ಸರ್ಕಾರಗಳು. ಹೀಗೆ ಅಧಿಕಾರಕ್ಕೆ ಬಂದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. 5 ಸಾವಿರ ಕೋಟಿಗೂ ಮೀರಿ ಮುಡಾದಲ್ಲಿ ಅಕ್ರಮ ನಡೆದಿದೆ. ಲೋಕಾಯುಕ್ತ ಪಾರದರ್ಶಕವಾಗಿ ತನಿಖೆ ಮಾಡಿಲ್ಲ" ಎಂದು ವಿಧಾನಪರಿಸತ್​ ಸದಸ್ಯ ಹೆಚ್​.ವಿಶ್ವನಾಥ್​ ಆರೋಪಿಸಿದರು.

ಮೈಸೂರು ಟೌನ್‌ ಹಾಲ್‌ ಬಳಿ ಮಾದ್ಯಮದ ಜೊತೆಗೆ ಮಾತನಾಡಿದ ಅವರು, "ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸುವಾಗ ಹಿಂದಿನಿಂದ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್‌ 62 ಕೋಟಿ ಬರಬೇಕು ಎಂದು ಸಿದ್ದರಾಮಯ್ಯನವರಿಗೆ ಹೇಳಿಕೊಡ್ತಾರೆ. ಅದನ್ನು ಯಾಕೆ ಗಮನಿಸುತ್ತಿಲ್ಲ ಲೋಕಾಯುಕ್ತ? ಇವೆಲ್ಲವುಗಳಿಂದ ಸಿದ್ದರಾಮಯ್ಯ ಪಾತ್ರವಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.

ವಿಧಾನಪರಿಸತ್​ ಸದಸ್ಯ ಹೆಚ್​.ವಿಶ್ವನಾಥ್​ (ETV Bharat)

ದರೋಡೆಗಳು, ಮೈಕ್ರೋ ಫೈನಾನ್ಸ್‌ ಹಾವಳಿ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇಲ್ಲ ಅನಿಸುತ್ತದೆ. ಪೊಲೀಸ್‌ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಅಧಿಕಾರಿಗಳಾಗಿ ಕೆಲಸ ಮಾಡಬೇಕು, ಶಾಸಕರ ಅಧಿಕಾರಿಗಳಾಗಬಾರದು. ಬೆಂಗಳೂರಿನಲ್ಲಿ ಎಸಿಪಿ ಪೋಸ್ಟಿಂಗ್​ಗೆ 2 ಕೋಟಿ ನೀಡಬೇಕು. ಮೈಸೂರಿನಲ್ಲಿ ಎಷ್ಟು ನೀವೇ ಹೇಳಬೇಕು? ಪೊಲೀಸ್​ನವರೇ ರಾಬರಿ ಮಾಡಿಸುತ್ತಾರೆ. ಹಾಗಾಗಿ ಪೊಲೀಸ್‌ ಇಲಾಖೆ ಹಾಳಾಗಿ ಹೋಗಿದೆ. ಪರಮೇಶ್ವರ್​ಗೆ ಸಬ್​ಇನ್​ಸ್ಪೆಕ್ಟರ್‌ ವರ್ಗಾವಣೆ ಮಾಡುವ ಅಧಿಕಾರ ಮಾತ್ರ ಇದೆ. ಉಳಿದ ಅಧಿಕಾರ ಮುಖ್ಯಮಂತ್ರಿ ನಿಭಾಯಿಸುತ್ತಾರೆ. ಇದರಿಂದ ಗೃಹಮಂತ್ರಿ ಡಮ್ಮಿ ಅಂತ ಅನಿಸುತ್ತದೆ" ಎಂದು ದೂರಿದರು.

ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ: ಸಿದ್ದರಾಮಯ್ಯ ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ ಮೂಡಿಸುವಂತಹದ್ದು, ಅಪನಂಬಿಕೆ ಮೂಡಿಸುವಂತಹದ್ದು ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಕೋರ್ಟ್‌ ಕೊಟ್ಟಂತಹ ತೀರ್ಮಾನದ ಬಗ್ಗೆ ಗೌರವವಿಲ್ವಾ? ಸುಗ್ರೀವಾಜ್ಞೆ ತಂದಿರುವುದು ತಪ್ಪಿಸಿಕೊಳ್ಳುವುದಕ್ಕೆ. ಯದುವಂಶದವರ ಕೂರಿಸಿ ಒಂದು ಸೆಟ್ಲ್​ಮೆಂಟ್​ ಮಾಡಿಕೊಳ್ಳಬಹದು" ಎಂದು ಸಲಹೆ ನೀಡಿದರು.

"ಮೈಸೂರು ಅರಮನೆ ಬಗ್ಗೆ ಚೇಷ್ಟೇ ಮಾಡುವುದು, ಕಿರುಕುಳ ಕೊಡುವುದು ಮಾಡ್ತಾನೆ ಇರುತ್ತಾರೆ ಸಿದ್ದರಾಮಯ್ಯ. ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಕೆಲಸಕ್ಕೂ ಮುಂದಾಗಿದ್ದರು. ಇದು ಹುಚ್ಚಾಟ. ಯದುವಂಶದ ರಾಜರೆಂದರೆ ಪ್ರಪಂಚದಲ್ಲಿ ಹೆಸರುವಾಸಿ. ಬಹಳ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿ ಹೋದ ರಾಜರು ಮೈಸೂರು ಮಹಾರಾಜರು ಮಾತ್ರ. ಅಂತಹ ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡುವುದು ಒಳ್ಳೆಯದಲ್ಲ. ನಾನು ಡೆಮಾಕ್ರೆಟಿಕ್‌ ಅಂತ ತೋರಿಸಿಕೊಳ್ಳುತ್ತಿರುವುದು, ತೋರಿಕೆಯ ಮಾತು" ಎಂದರು.

ಲಕ್ಷ್ಮಣ್‌ ವಿರುದ್ಧ ವಾಗ್ದಾಳಿ: "ನಿಮಗೇಕೆ ಬಿಜೆಪಿ ಉಸಾಬರಿ, ನೀವು ಜೆಡಿಎಸ್-ಬಿಜೆಪಿ ವಿರುದ್ಧ ಮಾತನಾಡುತ್ತೀರಾ, ಹಲವಾರು ವಿಚಾರಗಳ ಬಗ್ಗೆ ಹಲವರು ಮಾತನಾಡುತ್ತಾರೆ. ಇದು ಜನತಂತ್ರ ವ್ಯವಸ್ಥೆ. ದೊಡ್ಡ ಬುದ್ಧಿವಂತನ ಥರ ಮಾತನಾಡುವುದು ಸರಿಯಲ್ಲ ಲಕ್ಷ್ಮಣ್‌" ಎಂದರು.

ಬಿಜೆಪಿಯಲ್ಲಿ ಅಧ್ಯಕ್ಷರ ಚುನಾವಣೆ ನಡೆಯಬೇಕು: "ರೆಡ್ಡಿ ಯಾರೆಂದು ಗೆದ್ದಿದ್ದು? ರೆಡ್ಡಿ ದುಡ್ಡು, ವೋಟ್‌ ನಮ್ಮ ವಾಲ್ಮೀಕಿ ಸಮಾಜದ್ದು. ಬಳ್ಳಾರಿ ಅಂದರೆ ವಾಲ್ಮೀಕಿ ಸಮಾಜ ಹಾಗೂ ಹಿಂದುಳಿದ ವರ್ಗಗಳ ವೋಟ್​. ನಾನೇ ಇವನನ್ನು ಬೆಳೆಸಿದೆ ಅಂದ್ರೆ, ದುಡ್ಡೇನು ನಿಮ್ಮ ಅಪ್ಪನ ಮನೆಯಿಂದ ತಂದಿಯಾ? ಗಣಿ ದುಡ್ಡು ಕೊಟ್ಟೆ. ರಾಮುಲು ಒಂದು ಸಮಾಜದ ನಾಯಕ, ಅಷ್ಟು ಹಗುರವಾಗಿ ಮಾತನಾಡಬಾರದು. ಎಲ್ಲ ಡಮ್ಮೀ ವರಿಷ್ಟರುಗಳೇ. ವಿಜಯೇಂದ್ರ ಯಾರು, ಯಡಿಯೂರಪ್ಪ ಯಾರು ಎನ್ನುವುದು ಜನರಿಗೆ ಗೊತ್ತಿಲ್ವ? ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಬೇಕು" ಎಂದು ಹೇಳಿದರು.

ಜಿಟಿಡಿ ಸಿದ್ದರಾಮಯ್ಯನ ಮೆಚ್ಚಿಸುತ್ತಿದ್ದಾರೆ: "ಮುಡಾ ಸೈಟ್‌ ಹಗರಣದಿಂದ ತಪ್ಪಿಸಿಕೊಳ್ಳಲು ಶಾಸಕ ಜಿ.ಟಿ.ದೇವೇಗೌಡ ಸಿದ್ದರಾಮಯ್ಯನ ಮೆಚ್ಚಿಸೋಕೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಬೈಯ್ಯುತ್ತಿದ್ದಾರೆ. ಯಾರು ಯಾವ ಪಾರ್ಟಿ ಬಿಟ್ಟುರು ಏನೂ ಆಗಲ್ಲ. ಪಾರ್ಟಿ ಅಂದರೆ ಜನರು. ಜಿ.ಟಿ.ದೇವೇಗೌಡ ಬಂದು ಎಲ್ಲರನ್ನು ಗೆಲ್ಲಿಸಿಬಿಡ್ತಾರಾ? ನನಗೆ ಯಾವ ಅಧ್ಯಕ್ಷ ಸ್ಥಾನವೂ ಬೇಡ. ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿ ಉಳಿಯುತ್ತೇನೆ" ಎಂದರು.

ಕುಮಾರಸ್ವಾಮಿ ಸತ್ಯ ಹೇಳಿದ್ದಾರೆ: ಮೊನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಮೀಟಿಂಗ್​ಗೆ ಅವರು ನಮ್ಮನ್ನು ಕರೆದಿಲ್ಲ. ಮೈಸೂರಿನವರು ಯಾವ ಮೀಟಿಂಗ್​ಗೂ ಕರೆಯುವುದಿಲ್ಲ. ಬಿಜೆಪಿಗೆ ಸಾಮಾನ್ಯ ಪ್ರಜ್ಞೆಯಿಲ್ಲ. ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ. ಕುಮಾರಸ್ವಾಮಿ ನಿನ್ನೆ ಕೆ.ಆರ್.‌ನಗರದಲ್ಲಿ ಸತ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್​ಗೆ ಕರೆತಂದಿದ್ದು ಯಾರು? ಸಿಎಂ ಮಾಡಿದ್ದು ಯಾರು? ಎಲ್ಲವನ್ನು ಹೆಚ್​ಡಿಕೆ ಜನರಿಗೆ ತಿಳಿಸಿ ಹೋಗಿದ್ದಾರೆ" ಎಂದರು.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್​ ಹಾವಳಿ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ಹೆಚ್ಚಾಗಿದೆ: ಹೆಚ್​ ಡಿ ಕುಮಾರಸ್ವಾಮಿ

Last Updated : Jan 25, 2025, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.