ETV Bharat / state

ಎಲ್ಲವನ್ನೂ ವರಿಷ್ಠರು ತೀರ್ಮಾನ ಮಾಡ್ತಾರೆ: ಸಚಿವ ಕೃಷ್ಣ ಬೈರೇಗೌಡ

ನಮ್ಮ ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿದೆ. ಜನ ಬದಲಾವಣೆ ಬಯಸಿ ಸರ್ಕಾರ ತಂದಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಸಚಿವ ಕೃಷ್ಣ ಭೈರೇಗೌಡ
ಸಚಿವ ಕೃಷ್ಣ ಭೈರೇಗೌಡ
author img

By ETV Bharat Karnataka Team

Published : Jan 17, 2024, 8:15 PM IST

Updated : Jan 17, 2024, 8:31 PM IST

ಸಚಿವ ಕೃಷ್ಣ ಬೈರೇಗೌಡ

ಮೈಸೂರು : ಯಾರು ಯಾವಾಗ ಸಿಎಂ, ಡಿಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು. ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡ ಸಚಿವ ಕೃಷ್ಣ ಬೈರೇಗೌಡ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಆ ತೀರ್ಮಾನ ನಮ್ಮ ಕೈಯಲ್ಲಿ ಇರುವುದಿಲ್ಲ. ಹೀಗಾಗಿ ಈ ರೀತಿಯ ಚರ್ಚೆಗಳಿಂದ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೀಗಾಗಿ ಈ ರೀತಿಯ ವಿಚಾರಗಳು, ಹೇಳಿಕೆಗಳ ಚರ್ಚೆಗೆ ಅವಕಾಶ ಕೊಡಬೇಡಿ ಎಂದರು.

ಅವರಿಗೆ ಸೂಚನೆ ನೀಡುವ ಸ್ಥಾನದಲ್ಲಿ ನಾನಿಲ್ಲ. ಆದರೆ, ಈ ರೀತಿಯ ವಿಚಾರಕ್ಕಿಂತ ಅಭಿವೃದ್ಧಿ ವಿಚಾರಗಳ ಚರ್ಚೆ ಆಗಲಿ ಎಂಬುದಷ್ಟೇ ನನ್ನ ಮನವಿ ಹಾಗೂ ಸಲಹೆ ಎಂದು ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಕೆ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದರು. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆ. ಜನ ಬದಲಾವಣೆ ಬಯಸಿ ಸರ್ಕಾರ ತಂದಿದ್ದಾರೆ. ಇವತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ನಮ್ಮೆಲ್ಲರ ಗುರಿ ಏನೆಂದರೆ ಜನ ಯಾವ ನಿರೀಕ್ಷೆ ಇಟ್ಟುಕೊಂಡು ಇಲ್ಲಿ ಕೂರಿಸಿದ್ದಾರೋ ಅದನ್ನು ಈಡೇರಿಸುವುದು. ಜನರಿಗೆ ಒಳ್ಳೆಯ ರೀತಿಯ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಯಾರು ಯಾವಾಗ ಇವೆಲ್ಲವೂ ಕೂಡ ವರಿಷ್ಠರು, ನಮ್ಮ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಪಕ್ಷದಲ್ಲಿ ತೀರ್ಮಾನಿಸುತ್ತಾರೆ ಎಂದರು.

ಆದರೆ, ಇವತ್ತು ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಮುಖ್ಯ. ನಾನು ಇಲ್ಲ ಎಂದು ಹೇಳುವುದಿಲ್ಲ. ಆದರೆ, ಅದೆಲ್ಲಕ್ಕಿಂತ ಜನರಿಗೆ ನಾವು ಅಧಿಕಾರದಲ್ಲಿ ಇರುವಾಗ ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ. ಹಾಗಾಗಿ ನಾವು ತಮ್ಮಲ್ಲಿ ಮನವಿ ಮಾಡುವುದು ನಿಮ್ಮ ಸಮಯ ಮತ್ತು ನಮ್ಮ ಸಮಯವನ್ನು ಜನಗಳ ಸಮಸ್ಯೆಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಟ್ಟರೆ ಜನರಿಗೆ ಅನುಕೂಲ ಆಗುತ್ತದೆ ಎಂದರು.

ಸೂಚನೆ ಕೊಡುವಷ್ಟು ನಾನು ದೊಡ್ಡವನಲ್ಲ : ನನ್ನ ವಿವೇಚನೆಗೆ ತಿಳಿದಿರುವುದನ್ನ ನಾನು ನಿಮ್ಮ ಜೊತೆಗೆ ಹಂಚಿಕೊಳ್ಳಬಹುದು. ನಿಮಗೆ ಕೇಳುವ ಹಕ್ಕಿದೆ. ನೀವು ಕೇಳಬಹುದು. ಅದನ್ನು ಬಿಟ್ಟು ಯಾರು ಏನು ಮಾತನಾಡಬೇಕು ಎಂದು ಸೂಚನೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ ಇರೋ ಸಮಯವನ್ನು ಸಾರ್ವಜನಿಕರ ಸಮಸ್ಯೆಗಳಿಗೆ ಗಮನ ಕೊಟ್ಟರೆ, ಸಾರ್ವಜನಿಕರ ಸಮಸ್ಯೆಗಳ ಕುರಿತು ನೀವು ನಮ್ಮಲ್ಲಿ ಪ್ರಶ್ನೆ ಮಾಡಿದರೆ, ನಾವು ಸಹ ಸಾರ್ವಜನಿಕರ ಪರವಾಗಿ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ : ಬಿಜೆಪಿಯವರು ಜನ ನೆಮ್ಮದಿಯಾಗಿದ್ದರೆ ಅವರನ್ನು ಒಡೆದು, ಜನರ ನೆಮ್ಮದಿಯನ್ನು, ಸಮಾಜವನ್ನು ಒಡೆದು ಆಳುವಂತಹದ್ದು, ಮತ ಗಳಿಸುವಂತಹದ್ದು ಬಿಜೆಪಿಯವರ ಸಂಸ್ಕೃತಿ ಆಗಿಬಿಟ್ಟಿದೆ. ಅವರಿಗೆ ಬರೀ ಭಾವನೆಗಳನ್ನು ಕೆದಕುವುದು, ಅದರ ಮುಖಾಂತರ ರಾಜಕೀಯ ಮಾಡುವುದು, ವೋಟ್​ ಗಳಿಸುವುದು. ಅದರಿಂದ ಅವರು ಏಳಿಗೆ ಆಗಬೇಕೇ ಹೊರತು ಜನಗಳಿಗೆ ಕಲ್ಯಾಣ ಮಾಡಲು, ಜನಗಳಿಗೆ ಒಳ್ಳೆಯದು ಮಾಡಲು ಅವರಿಗೆ ಆಗುವುದಿಲ್ಲ ಎಂದರು.

ರೈತರು ಕೆಲಸ ಕಾರ್ಯ ಬಿಟ್ಟು ದಿನವಿಡೀ ಅಲೆಯುತ್ತಿದ್ದಾರೆ : ಇಂದು ಮೈಸೂರು ಜಿಲ್ಲೆಯಲ್ಲಿ ಈ ಜಿಲ್ಲೆಯ ಕಂದಾಯ ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆಯನ್ನು ಇಟ್ಟುಕೊಂಡಿದ್ದೇವೆ. ಮೈಸೂರಿನಲ್ಲಿ ಇದು ಎರಡನೇ ಸಭೆ ನಾನು ಮಾಡುತ್ತಿರುವುದು. ನಾಲ್ಕೈದು ತಿಂಗಳ ಹಿಂದೆ ಒಂದು ಸುತ್ತು ಸಭೆ ಮಾಡಿ, ಇಂದು ಎರಡನೇ ಸುತ್ತಿನ ಸಭೆ ನಡೆಸುತ್ತಿದ್ದೇನೆ. ಕಂದಾಯ ಇಲಾಖೆಯಲ್ಲಿ ರೈತರಿಂದ ಹಿಡಿದು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಕಂದಾಯ ಇಲಾಖೆಯ ಮೇಲೆ ಅವಲಂಬಿತರಾಗಿದ್ದಾರೆ. ಇದರಲ್ಲಿ ಕೆಲವು ಕೆಲಸ ಆಗುತ್ತವೆ. ಇನ್ನೂ ಕೆಲವು ಬಹಳ ವಿಳಂಬವಾಗುತ್ತವೆ. ನಾವು ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಎಷ್ಟೋ ಜಿಲ್ಲೆಗಳಲ್ಲಿ ಸರ್ವೇ ಸೇರಿದಂತೆ ಇನ್ನಿತರ ಕೆಲಸಗಳಿಗೆ ಜನರು ಮತ್ತು ರೈತರು ದೈನಂದಿನ ಕೆಲಸ ಬಿಟ್ಟು ದಿನವೆಲ್ಲ ತಾಲೂಕು ಕಚೇರಿಯನ್ನು ಅಲೆಯುವಂತಾಗಿದೆ. ಕೆಲವೊಂದು ಇಲಾಖೆಯಲ್ಲಿ ತೊಂದರೆ ಆಗುತ್ತವೆ. ಕೆಲವು ಕೆಲಸಗಳು ಬಹಳ ವಿಳಂಬವಾಗುತ್ತಿರುವುದನ್ನ ಮುಖ್ಯಮಂತ್ರಿಗಳು ಗಮನಿಸಿ, ನನಗೆ ಸೂಚನೆ ಕೊಟ್ಟಿದ್ದಾರೆ. ನನಗೂ ಗೊತ್ತಿದೆ. ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲರಿಗೂ ಇದು ಗೊತ್ತಿರುವಂತ ವಿಷಯ. ಹಾಗಾಗಿ ಇವುಗಳನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: FRUITS ಆ್ಯಪ್ ಮೂಲಕ ಬರ ಪರಿಹಾರ ವಿತರಣೆ: ಸಚಿವ ಕೃಷ್ಣ ಭೈರೇಗೌಡ

Last Updated : Jan 17, 2024, 8:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.