ETV Bharat / state

ಶಾಲೆ ಪ್ರಾರಂಭದ ಬಗ್ಗೆ ಒಂದು ವಾರದಲ್ಲಿ ವರದಿ: ಸಚಿವ ಶ್ರೀರಾಮುಲು

author img

By

Published : Oct 7, 2020, 1:49 PM IST

ಶಾಲೆ ಪ್ರಾರಂಭ ಮಾಡಲು ಯಾವುದೇ ಗಡಿಬಿಡಿಯಿಲ್ಲ. ತಜ್ಞರ, ಪೋಷಕರ, ಇತರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವಸ್ಥರ ಸಲಹೆ ಪಡೆದು ಒಂದು ವಾರದಲ್ಲಿ ಶಿಕ್ಷಣ ಇಲಾಖೆಗೆ ಆರೋಗ್ಯ ಇಲಾಖೆಯಿಂದ ವರದಿ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಶ್ರಿರಾಮುಲು ಹೇಳಿದರು.

ಆರೋಗ್ಯ ಸಚಿವ ಶ್ರಿರಾಮುಲು
ಆರೋಗ್ಯ ಸಚಿವ ಶ್ರಿರಾಮುಲು

ಮೈಸೂರು: ಶಾಲೆ ಪ್ರಾರಂಭದ ಬಗ್ಗೆ ತಜ್ಞರು ಮತ್ತು ಪೋಷಕರ ಜೊತೆ ಸಮಾಲೋಚನೆ ನಡೆಸಿ ಒಂದು ವಾರದಲ್ಲಿ ವರದಿ ಕೊಡಲಾಗುವುದು ಎಂದು ಆರೋಗ್ಯ ಸಚಿವ ಶ್ರಿರಾಮುಲು ಹೇಳಿದರು.

ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಳ ದಸರಾ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲು ಆಗಮಿಸಿದ ಸಚಿವ ಶ್ರಿರಾಮುಲು ಮಾಧ್ಯಮಗಳ ಜೊತೆ ಮಾತನಾಡಿದರು. "ದೇಶದ 17 ರಾಜ್ಯಗಳ 60 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಅದರಲ್ಲಿ ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ಸೇರಿಕೊಂಡಿದೆ. ಈ ವಿಚಾರದ ಬಗ್ಗೆ ನಾವೆಲ್ಲಾ ಗಮನ ಹರಿಸಬೇಕು. ದಸರಾ ಉತ್ಸವ ಸಂದರ್ಭದಲ್ಲಿ ಬಹಳಷ್ಟು ಜನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂಗೆ ತಿಳಿಸಿದ್ದಾರೆ" ಎಂದರು.

ಆರೋಗ್ಯ ಸಚಿವ ಶ್ರಿರಾಮುಲು

ಇನ್ನು ಶಾಲೆ ಪ್ರಾರಂಭದ ಬಗ್ಗೆ ಮಾತನಾಡಿದ ಅವರು, ಶಾಲೆ ಆರಂಭಕ್ಕೆ ಯಾವುದೇ ಗಡಿಬಿಡಿ ಇಲ್ಲ. ಈ ಬಗ್ಗೆ ಇಲಾಖೆಯ ಸಲಹೆಯನ್ನು ಕೇಳಿದ್ದಾರೆ. ಅದರಂತೆ ತಜ್ಞರ, ಪೋಷಕರ, ಇತರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವಸ್ಥರ ಸಲಹೆ ಪಡೆದು ಒಂದು ವಾರದಲ್ಲಿ ಶಿಕ್ಷಣ ಇಲಾಖೆಗೆ ಆರೋಗ್ಯ ಇಲಾಖೆಯಿಂದ ವರದಿ ಕೊಡುತ್ತೇವೆ ಎಂದರು.

ಮುಖ್ಯವಾಗಿ ದಸರಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರನ್ನು ಉಲ್ಲೇಖಿಸಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡು ಸರಳ ದಸರಾ ಆಚರಣೆ ಬಗ್ಗೆ ಈ ಮೀಟಿಂಗ್​ನಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.