ETV Bharat / state

ಮೆಗಾ ಲೋಕ ಅದಾಲತ್: ವಿಚ್ಛೇದನ ಕೋರಿ ಬಂದಿದ್ದ ವೃದ್ಧ ದಂಪತಿ ಸೇರಿ ಮತ್ತೆ ಒಂದಾದ 37 ಜೋಡಿಗಳು - Mysore latest update news

ಮೈಸೂರಲ್ಲಿ ಬರೋಬ್ಬರಿ 37 ಜೋಡಿಗಳು ಮತ್ತೆ ಒಂದಾಗಿವೆ. ವಿಚ್ಛೇದನ ಪಡೆಯಲು ಬಂದವರು ಮತ್ತೊಮ್ಮೆ ಪರಸ್ಪರ ಹೊಂದಾಣಿಕೆ ಮೂಲಕ ಕೂಡಿಕೊಂಡು ಹೊಸ ಜೀವನ ಆರಂಭಿಸಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್ ಅವರ ಅಧ್ಯಕ್ಷತೆಯಲ್ಲಿ ಮೆಗಾ ಲೋಕ ಅದಾಲತ್ ಈ ಘಟನೆಗೆ ಸಾಕ್ಷಿಯಾಗಿದೆ.

mega lok adalath
ಮೆಗಾ ಲೋಕ ಅದಾಲತ್
author img

By

Published : Mar 27, 2021, 10:46 PM IST

ಮೈಸೂರು: ನಗರ ಮತ್ತು ತಾಲೂಕಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದ 24,583 ಪ್ರಕರಣಗಳಲ್ಲಿ 184 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಒಳಗೊಂಡಂತೆ 14,237 ರಾಜಿ ಸಂಧಾನದ ಮೂಲಕ ಮೆಗಾ ಲೋಕ ಅದಾಲತ್​​ನಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಕಕ್ಷಿದಾರರಿಗೆ ಮತ್ತು ಜನಸಾಮಾನ್ಯರಿಗೆ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಅನುಕೂಲ ಮಾಡುವ ಉದ್ದೇಶದಿಂದ 54 ನ್ಯಾಯಿಕ ಪೀಠಗಳನ್ನು ರಚಿಸಿಕೊಂಡು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್ ಅವರ ಅಧ್ಯಕ್ಷತೆಯಲ್ಲಿ ಮೆಗಾ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿತ್ತು.

ಈ ಮೆಗಾ ಅದಾಲತ್​​ನಲ್ಲಿ ನ್ಯಾಯಾಧೀಶರಾದ ಎನ್.ಎಸ್. ಪಾಟೀಲ್, ಎ.ವಿಜಯ್, ಹಾಗೂ ವಿರೂಪಾಕ್ಷ ಹಿರೇಮಠ ಅವರ ನೇತೃತ್ವದಲ್ಲಿ 173 ಕೌಟುಂಬಿಕ ವ್ಯಾಜ್ಯಗಳಲ್ಲಿ 138 ಕೇಸ್​ಗಳು ಇತ್ಯರ್ಥವಾಗಿದ್ದು, ಆ ಪೈಕಿ 29 ಜೋಡಿಗಳನ್ನು ಮತ್ತೆ ಒಂದು ಮಾಡಲಾಗಿದೆ.

ಹಾಗೆಯೇ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಪುಂಡಲಿಕ್ ಹೊಸಮನೆ ಅವರ ನೇತೃತ್ವದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಸುಮಾರು 60-65 ವಯಸ್ಸಿನ ಗಂಡ ಹೆಂಡತಿಯನ್ನು ಮತ್ತೆ ಒಂದುಗೂಡಿಸಿ ಕಳುಹಿಸಲಾಗಿದೆ.

ಆಸ್ತಿ ವಿಭಜನೆ ಕೇಳಿ ಹಾಕಿದ 1291 ದಾವೆಗಳಲ್ಲಿ 147 ದಾವೆಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದ್ದು, 1983ರಲ್ಲಿ ಆಸ್ತಿಪಾಲು ಕೇಳಿ ಹಾಕಿದ ದಾವೆಯನ್ನು 2ನೇ ಹೆಚ್ಚುವರಿ ನ್ಯಾಯಾಧೀಶರಾದ ದಿವಾಣಿ ಮತ್ತು ಜೆಎಂಎಫ್ ಎಸ್ ಆದಂಥಹ ಪಿ.ಆರ್. ಸವಿತಾ ಅವರು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ.

ಗ್ಯಾಂಗ್ರಿನ್​ನಿಂದ ಬಳಲುತ್ತಿದ್ದ ಕಕ್ಷಿದಾರರೊಬ್ಬರು ಲೋಕ ಅದಾಲತ್​ಗೆ ಖುದ್ದಾಗಿ ಹಾಜರಾಗಿ ಅಲ್ಲಿ ತನ್ನ ದಾವೆಯನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ಕೊಂಡಿದ್ದಾರೆ. ಒಂದು ದಾವೆಯಲ್ಲಿ 17 ಜನ ಕಕ್ಷಿಗಾರರು ಪಾಲು ವಿಭಾಗ ಕೇಳಿ ಹಾಕಿದ ದಾವೆಯೂ ಇತ್ಯರ್ಥಗೊಂಡಿದೆ.

ಇನ್ನಿತರ ಪ್ರಕರಣಗಳಾದ ಎಫ್​​ಡಿಪಿಯಲ್ಲಿ 248 ಪ್ರಕರಣಗಳಲ್ಲಿ 31 ಪ್ರಕರಣ ಇತ್ಯರ್ಥವಾಗಿದೆ. 1759 ಅಮಲು ಜಾರಿ ಪ್ರಕರಣಗಳಲ್ಲಿ 656 ಪ್ರಕರಣಗಳು ಮತ್ತು ಇತರೆ 2306 ಸಿವಿಲ್ ಪ್ರಕರಣಗಳಲ್ಲಿ 243, ಬ್ಯಾಂಕ್ ಚೆಕ್ ಬೌನ್ಸ್ ನ 2697 ಪ್ರಕರಣಗಳಲ್ಲಿ 312 ಪ್ರಕರಣಗಳು, 1210 ಕ್ರಿಮಿನಲ್ ಪ್ರಕರಣಗಳಲ್ಲಿ 491 ಪ್ರಕರಣಗಳು ಇತ್ಯರ್ಥವಾಗಿವೆ. ಮೋಟರ್ ವಾಹನದ 555 ಪ್ರಕರಣಗಳಲ್ಲಿ 199 ಪ್ರಕರಣಗಳು ಇತ್ಯರ್ಥವಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ ಒಟ್ಟು 8 ವಿವಾಹ ವಿಚ್ಛೇದನ ಕೇಸ್​​ಗಳಲ್ಲಿ 3 ಜೋಡಿಗಳು ಒಂದಾಗಿದ್ದು, ಜೀವನಾಂಶ ಕೇಳಿ ಬಂದವರಲ್ಲಿ 5 ಜೋಡಿಗಳನ್ನು ಸಹ ಒಂದುಗೂಡಿಸಲಾಗಿದೆ.

ಕೆ.ಆರ್.ನಗರ ತಾಲೂಕಿನಲ್ಲಿ ಆಸ್ತಿ ಪಾಲು ಕೇಳಿ ಬಂದ 80 ವರ್ಷಕ್ಕೂ ಮೇಲ್ಪಟ್ಟ ಹಿರಿಯರಾದ ಅಣ್ಣ ಮತ್ತು ಇಬ್ಬರು ತಂಗಿಯರ ವ್ಯಾಜ್ಯವನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ದಿವಾಣಿ ಅವರ ನೇತೃತ್ವದಲ್ಲಿ ರಾಜಿ ಮೂಲಕ ಇತ್ಯರ್ಥಗೊಳಿಸಲಾಗಿದೆ. ಈ ಮೆಗಾ ಅದಾಲತ್​​ನಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಒಟ್ಟು 97,35,88,402 ರೂ. ಮೊತ್ತಗಳಷ್ಟು ಸಂಗ್ರಹವಾಗಿದೆ ಎಂದು ದೇವರಾಜ ಭೂತೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.