ETV Bharat / state

ವಿದ್ಯುತ್ ತಗುಲಿ ಕಂಬದಲ್ಲೇ ಪ್ರಾಣಬಿಟ್ಟ ಮೆಕ್ಯಾನಿಕ್.. ಇನ್ನೋರ್ವನ ಸ್ಥಿತಿ ಗಂಭೀರ - Junior Powerman

ವಿದ್ಯುತ್ ಶಾಕ್​ಗೆ ಮೆಕ್ಯಾನಿಕ್ ಕಂಬದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರಿನ ಹುಣಸೂರು ತಾಲೂಕಿನಲ್ಲಿ ದುರ್ಘಟನೆ ನಡೆದಿದೆ.

Mechanic died
ಮೆಕ್ಯಾನಿಕ್ ಸಾವು
author img

By

Published : Jul 27, 2021, 9:35 AM IST

Updated : Jul 27, 2021, 9:51 AM IST

ಮೈಸೂರು: ಟ್ರಾನ್ಸ್​ಫಾರ್ಮರ್ ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಓರ್ವ ಮೆಕ್ಯಾನಿಕ್ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ‌.

ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ನಿವಾಸಿ ಕರಿನಾಯ್ಕ ಮೃತ ದುರ್ದೈವಿ. ಗಂಭೀರ ಸ್ಥಿತಿಯಲ್ಲಿರುವ ಜ್ಯೂನಿಯರ್ ಪವರ್‌ಮ್ಯಾನ್ ಮನೋಜ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಬದಲ್ಲೇ ಪ್ರಾಣಬಿಟ್ಟ ಮೆಕ್ಯಾನಿಕ್

ಓದಿ : ಪೋಷಕರೊಂದಿಗೆ ಬಟ್ಟೆ ತೊಳೆಯಲು ಹೋದ ಮಕ್ಕಳು.. ಮೂವರು ಸಹೋದರಿಯರು ಸೇರಿ ನಾಲ್ವರು ನೀರುಪಾಲು!

ಹುಣಸೂರು ತಾಲೂಕು ಚಲ್ಲಹಳ್ಳಿಯ ಬಿಳಿಕೆರೆ ಉಪ ವಿಭಾಗದ ಮೆಕ್ಯಾನಿಕ್ ಆಗಿದ್ದ ಕರಿ‌‌ನಾಯ್ಕ ಹಾಗೂ ಜ್ಯೂನಿಯರ್ ಪವರ್ ಮ್ಯಾನ್ ಮನೋಜ್ ಚಲ್ಲಹಳ್ಳಿ ಗ್ರಾಮದಲ್ಲಿ ಟ್ರಾನ್ಸ್ ಫಾರ್ಮರ್ ದುರಸ್ತಿಗಾಗಿ ವಿದ್ಯುತ್ ಕಂಬ ಏರಿದಾಗ ವಿದ್ಯುತ್ ಪ್ರವಹಿಸಿ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 27, 2021, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.