ಮೈಸೂರು: ನಾನ್ ಕೋವಿಡ್ ವ್ಯಕ್ತಿಗೆ ಆಸ್ಪತ್ರೆ ಬೆಡ್ ಸಿಗದೆ ಆಟೋದಲ್ಲೇ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮದ ನಿವಾಸಿ ಶ್ರೀಕಾಂತ್(34) ಮೃತ ವ್ಯಕ್ತಿ. ಮನೆಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದ ಶ್ರೀಕಾಂತ್, ಬೆಳಗೊಳದ ಬಳಿ ಮನೆಗೆ ಬಣ್ಣ ಹೊಡೆಯುವಾಗ ಏಣಿಯಿಂದ ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದರು.
ಕೈ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿತ್ತು. ಆದರೆ, ಕೋವಿಡ್ ಹಿನ್ನೆಲೆ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಆಟೋದಲ್ಲೇ ಪ್ರಾಣ ಬಿಟ್ಟಿದ್ದಾರೆ.