ETV Bharat / state

ಇನ್ನೊಬ್ಬರ ಜೊತೆ ಮೊಬೈಲ್‌ನಲ್ಲಿ ಚಾಟ್‌... ಪ್ರೇಯಸಿಯ ಮೇಲೆ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ! - ಮೈಸೂರು ಮಾರಣಾಂತಿಕ ಹಲ್ಲೆ ಪ್ರಕರಣ

ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ಯುವಕರ ಜೊತೆ ಆಕೆ ಚಾಟ್ ಮಾಡಿದ್ದರಿಂದ ಲವ್ ಬ್ರೇಕ್​​ಅಪ್​​ ಮಾತುಕತೆ ನಡೆಸುವುದಾಗಿ ಯುವತಿಯನ್ನು ಕರೆಸಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ramesh
ಆರೋಪಿ ರಮೇಶ್
author img

By

Published : Apr 23, 2021, 9:02 AM IST

ಮೈಸೂರು: ಪ್ರೇಯಸಿಯ ನಡತೆ ಪ್ರಶ್ನಿಸಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ ನಡೆದಿದೆ.

ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದ ಯುವತಿ. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ ಬರುತ್ತಿದ್ದ ಮೆಸೇಜ್​ಗಳನ್ನು ತನ್ನ ಮೊಬೈಲ್​​ಗೆ ಬರುವಂತೆ ರಮೇಶ್ ಮಾಡಿಕೊಂಡಿದ್ದ. ಕೆಲವು ಯುವಕರ ಜೊತೆ ಯುವತಿ ಚಾಟ್ ಮಾಡಿದ್ದರಿಂದ ಈಕೆಯ ವಿರುದ್ಧ ತಿರುಗಿ ಬಿದ್ದು, ನಡತೆ ಬಗ್ಗೆ ರಮೇಶ್ ಶಂಕೆ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ಡಬಲ್ ಡ್ಯೂಟಿಗೆ ಹೋಗು ಎಂದ ಅಧಿಕಾರಿಗೆ ಆವಾಜ್ ಹಾಕಿದ ಚಾಲಕ

ಇದರಿಂದ ರೊಚ್ಚಿಗೆದ್ದ ಈತ, ಲವ್ ಬ್ರೇಕ್​​ಅಪ್​​ ಮಾತುಕತೆ ನಡೆಸುವುದಾಗಿ ಯುವತಿಯನ್ನು ಕರೆಸಿ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರೇ ಆರೋಪಿ ರಮೇಶ್​ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.