ETV Bharat / state

ಮೈಸೂರಿನ 7 ಕಡೆ ಲೋಕಾಯುಕ್ತ ದಾಳಿ: ಜೆಇ‌, ಇನ್ಸ್​ಪೆಕ್ಟರ್​ ಸೇರಿ ಅಧಿಕಾರಿಗಳಿಗೆ ಶಾಕ್​

ಮೈಸೂರಿನ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಗರದ ಏಳು ಕಡೆಗಳಲ್ಲಿ ವಿವಿಧ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆದಿದೆ.

Lokayukta raid in mysore
ಮೈಸೂರಿನ 7 ಕಡೆ ಲೋಕಾಯುಕ್ತ ದಾಳಿ: ಜೆಇ‌, ಇನ್ಸ್​ಪೆಕ್ಟರ್​ ಸೇರಿ ಅಧಿಕಾರಿಗಳಿಗೆ ಶಾಕ್​
author img

By

Published : Oct 21, 2022, 12:59 PM IST

ಮೈಸೂರು: ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ನಗರದ ಏಳು ಕಡೆಗಳಲ್ಲಿ ವಿವಿಧ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಜೆಇ‌ ರಫೀಕ್ ಮನೆ ಹಾಗೂ ಸಂಬಂಧಿಕರ ಮನೆ ಸೇರಿ ಕೆಲವೆಡೆ ದಾಳಿ ನಡೆದಿದೆ.

ಮಡಿಕೇರಿಯ ಸಣ್ಣ ನೀರಾವರಿ ಇಲಾಖೆಯ ಜೆಇ‌ ರಫೀಕ್ ಮನೆ ಸೇರಿ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಹಾಗೆಯೇ ಮಡಿಕೇರಿ ‌ಪಿಡಬ್ಲ್ಯೂಡಿ ಇಇ ನಾಗರಾಜ್ ಮನೆ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿರುವ ನಾಗರಾಜು ಅವರ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಕುಶಾಲನಗರ ಪೊಲೀಸ್ ಇನ್ಸ್​ಪೆಕ್ಟರ್ ಮಹೇಶ್ ನಿವಾಸದ ಮೇಲೆ ಕೂಡ ಲೋಕಾಯುಕ್ತರ ದಾಳಿ ನಡೆದಿದೆ. ಇವರು ಇಂಟೆಲಿಜೆನ್ಸ್​ ವಿಭಾಗಕ್ಕೆ‌ ವರ್ಗಾವಾದರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರು ಲೋಕಾಯುಕ್ತ ಎಸ್​​ಪಿ ಸುರೇಶ್ ಬಾಬು ನೇತೃತ್ವದ ತಂಡದಿಂದ ಏಳು ಕಡೆಗಳಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ: 5 ದಿನಗಳಲ್ಲಿ 1.52 ಕೋಟಿ ರೂ. ವ್ಯವಹಾರ: ಶಂಕೆ ಮೂಡಿಸಿದ ಚೀನಾ ಯುವಕರ ಕೃತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.