ಮೈಸೂರು: ಲಾಕ್‌ಡೌನ್ ಸಂದರ್ಭದಲ್ಲಿ ವ್ಯಾಪಾರದಲ್ಲಿ ಉಂಟಾದ ನಷ್ಟದಿಂದ ಮನನೊಂದು ವ್ಯಾಪಾರಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜೀವ್ ನಗರದಲ್ಲಿ ನಡೆದಿದೆ.
ಅಕ್ಬರ್ ಹುಸೇನ್ (37) ಎಂಬಾತ ನೇಣಿಗೆ ಶರಣಾದವರು. ಈತ ರಾಜೀವ್ ನಗರದ ನಿವಾಸಿಯಾಗಿದ್ದು, ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಿಯಾಗಿದ್ದ. ಸಾಕಷ್ಟು ಕಡೆ ಸಾಲ ಮಾಡಿಕೊಂಡಿದ್ದನಂತೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆ ಸರಿಯಾದ ವ್ಯಾಪಾರ ಇಲ್ಲದೆ ಸಾಲ ತೀರಿಸಲಾಗದೆ ಮನನೊಂದು ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.