ಮೈಸೂರು: ಕೆಲ ತಿಂಗಳ ಹಿಂದೆ ವಿದ್ಯಾರ್ಥಿಯನ್ನು ಬಲಿ ಪಡೆದು, ಸಾಕು ಪ್ರಾಣಿಗಳನ್ನು ತಿಂದು ಹಾಕಿದ್ದ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಕರು ತಿನ್ನಲು ಬಂದಿದ್ದ ಚಿರತೆ ಸೆರೆಯಾಗಿದೆ. ಚಿರತೆ ಬಲೆಗೆ ಬಿದ್ದ ತಕ್ಷಣ ಅರಣ್ಯಾಧಿಕಾರಿಗಳ ದೌಡಾಯಿಸಿದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಸ್ಥಳಕ್ಕೆ ಭೇಟಿ ಮುಗಿಬಿದ್ದಿದ್ದಾರೆ.
ವಿದ್ಯಾರ್ಥಿ ತಿಂದಿದ್ದ ಚಿರತೆ: ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆಂದು ವಿದ್ಯಾರ್ಥಿ ಹೋಗಿದ್ದಾಗ ಚಿರತೆ ದಾಳಿ ಮಾಡಿ ತಿಂದು ಹಾಕಿತ್ತು. ಬೆಟ್ಟದ ಸಮೀಪದಲ್ಲಿ ಉಕ್ಕಲಗೆರೆ ಗ್ರಾಮ ಇರುವುದರಿಂದ ನರಭಕ್ಷಕ ಚಿರತೆ ಸೆರೆಯಾಗಿದೆ ಎಂದು ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿರತೆ ಕಾಟದಿಂದ ಕಂಗೆಟ್ಟಿದ್ದ ಜನರು ಈಗ ಸ್ವಲ್ವ ನಿಟ್ಟುಸಿರುಬಿಟ್ಟಿದ್ದಾರೆ.
ಇದನ್ನೂಓದಿ:ಗಂಗಾ ಕಲ್ಯಾಣ ಯೋಜನೆ ಅಕ್ರಮ: ಸಿಐಡಿ ತನಿಖೆಗೆ ಸರ್ಕಾರ ನಿರ್ಧಾರ