ETV Bharat / state

ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಘೋಷಣೆ : ಸತೀಶ್ ಜಾರಕಿಹೊಳಿ - ವಿಧಾನ ಪರಿಷತ್ ಚುನಾವಣೆ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಘೋಷಣೆಯೊಂದೇ ಬಾಕಿ ಇದೆ. ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು..

ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ

author img

By

Published : Nov 20, 2021, 3:16 PM IST

ಮೈಸೂರು : ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿರುವುದು..

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ವಿಧಾನ ಪರಿಷತ್​​ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಘೋಷಣೆಯೊಂದೇ ಬಾಕಿ ಇದೆ. ‌ಈ ಅಭ್ಯರ್ಥಿಗಳನ್ನು ಜನ ಗುರುತಿಸಬೇಕು. ‌ಅಭ್ಯರ್ಥಿಗಳು ಆ ಭಾಗದಲ್ಲಿ ಜನಪ್ರಿಯರಾಗಿರಬೇಕು. ‌

ಜೊತೆಗೆ ಆಯಾ ಜಿಲ್ಲೆಯಲ್ಲಿ ಜನಪರ ಕೆಲಸ ಮಾಡಿರಬೇಕು ಎಂಬ ಮಾನದಂಡವನ್ನು ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷ ಈ ಹಿಂದೆ ಕೇಂದ್ರ ಹಾಗೂ ಸಿದ್ದರಾಮಯ್ಯ ಆಡಳಿತ ನಡೆಸಿದ ಕಾಲದಲ್ಲಿ ಮಾಡಿದ ಕೆಲಸಗಳು ಮಾನದಂಡವಾಗಲಿವೆ ಎಂದರು.

ದಲಿತ ಸಿಎಂ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವು 113 ಸೀಟ್ ಬಂದ ಮೇಲೆ ಆ ವಿಚಾರ. ‌ಈಗ ಗೊಂದಲ ಆಗಬಾರದು. ಈಗ ಚರ್ಚೆ ಮಾಡಬಾರದು ಎಂದರು. ಇನ್ನೂ ಸಿದ್ದರಾಮಯ್ಯ ಪರ್ಸಂಟೇಜ್ ಕಿಂಗ್ ಎಂಬ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಪ್ರಧಾನಿ ಅವರಿಗೆ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಬರೆದ ಪತ್ರ ನೋಡಿದರೆ ಸಾಕು ಎಂದು ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.