ಮೈಸೂರು : ಖ್ಯಾತ ವಿಚಾರವಾದಿ ಪ್ರೊ.ಕೆ ಎಸ್ ಭಗವಾನ್ ನಗರದ ಬಿಜೆಪಿ ಕಚೇರಿಯಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ನಿಯೋಗದೊಂದಿಗೆ ಮನವಿ ಸಲ್ಲಿಸಿರುವ ಅಚ್ಚರಿಯ ಬೆಳವಣಿಗೆ ನಡೆದಿದೆ.
ವೈಚಾರಿಕತೆಯ ಬಗ್ಗೆ ಮಾತನಾಡುತ್ತಲೇ ಬಿಜೆಪಿ ಸಿದ್ಧಾಂತಗಳನ್ನ ಪ್ರಶ್ನಿಸುವ ಸಾಹಿತಿ ಪ್ರೊ. ಕೆ ಎಸ್ ಭಗವಾನ್, ಪ್ರಗತಿಪರದೊಂದಿಗೆ ಹಾಗೂ ಕನ್ನಡ ಸ್ವಾಯತ್ತ ಕ್ರಿಯಾ ಸಮಿತಿಯ ಸದಸ್ಯರೊಂದಿಗೆ ಆಗಮಿಸಿ ಶಾಸ್ತ್ರೀಯ ಕನ್ನಡ ಅತ್ತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ಸಂಬಂಧ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಾಹಿತಿ ಪ್ರೊ.ಕೆ ಎಸ್ ಭಗವಾನ್, ಸಚಿವರು ಬಿಜೆಪಿ ಕಚೇರಿಯಲ್ಲಿದ್ದರು. ಮನವಿ ನೀಡಲು ನಿಯೋಗದ ಜೊತೆಗೆ ನಾನೂ ಹೋಗಿದ್ದೇನೆ ವಿನ: ಬೇರೆ ಕಾರಣ ಇಲ್ಲ ಎಂದು ಹೇಳಿದ್ದಾರೆ.