ಮೈಸೂರು: ಅನುಮತಿ ಪಡೆಯದೆ ಕೆ.ಆರ್.ಎಸ್ ಜಲಾಶಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿದ ವಿದ್ಯಾರ್ಥಿಯನ್ನು ಮೈಸೂರಿನಲ್ಲಿ ಕೆ.ಆರ್.ಎಸ್ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಡ್ರೋನ್ ಸಂದೀಪ್. ಈತ ನಗರದ ಖಾಸಗಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ಆ.10 ರ ಸಂಜೆ ತುಂಬಿರುವ ಕೆ.ಆರ್.ಎಸ್ ಡ್ಯಾಮ್ ಅನ್ನು ಡ್ರೋನ್ ಮೂಲಕ ಚಿತ್ರೀಕರಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ಸಂಬಂಧ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಕಿಶೋರ್ ಕುಮಾರ್ ಆ.14 ರಂದು ಕೆ.ಆರ್.ಎಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಡ್ರೋನ್ ಸಂದೀಪ್ ನನ್ನು ಮೈಸೂರಿನಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅನುಮತಿ ಇಲ್ಲದೆ ಡ್ರೋನ್ ಕ್ಯಾಮರಾದಲ್ಲಿ ಕೆ.ಆರ್.ಎಸ್ ಜಲಾಶಯವನ್ನು ಸೆರೆಹಿಡಿದ ಡ್ರೋನ್ ಕ್ಯಾಮರಾ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.