ETV Bharat / state

ಕೊರೊನಾ ಕಿಟ್ ಅವ್ಯವಹಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಭಾಗಿ: ಎಂ.ಲಕ್ಷ್ಮಣ್ ಆರೋಪ

ಸಿಎಂ ಕಾರ್ಯದರ್ಶಿ ಎಸ್. ವಿಶ್ವನಾಥ್ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಸಂಬಂಧಿಯೊಬ್ಬರು ಕೊರೊನಾ ಕಿಟ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.

Laxman
Laxman
author img

By

Published : Jul 16, 2020, 2:32 PM IST

ಮೈಸೂರು: ಕೊರೊನಾ ಕೇಂದ್ರಕ್ಕೆ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಸಿಎಂ ಕಾರ್ಯದರ್ಶಿ ಎಸ್ ವಿಶ್ವನಾಥ್ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಸಂಬಂಧಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಕೋವಿಡ್ -19 ಉಪಕರಣಗಳ ಖರೀದಿಯಲ್ಲಿ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಬಂಧಿ ಹಾಗೂ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಭಾಗಿಯಾಗಿದ್ದಾರೆ. ನೂರು ದಿನಗಳ ಬಾಡಿಗೆಗೆ ಹಾಸಿಗೆ, ದಿಂಬು, ಹೊದಿಕೆ ಕೊಳ್ಳಲು 240 ಕೋಟಿ ರೂ.ವೆಚ್ಚ ಮಾಡಲಾಗಿದೆ. ಈ ಗುತ್ತಿಗೆಯನ್ನು ಮಂತ್ರಿಗಳ ಸಂಬಂಧಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ತಿರುವನಂತಪುರಂನ ಎಚ್ ಎಲ್ ಎಲ್ ಕಂಪನಿಯಿಂದ 630 ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರ ಕೊಟ್ಟಿರುವ ಲೆಕ್ಕದಲ್ಲೂ ಇದು ನಮೂದಾಗಿದೆ. ಎಚ್ಎಲ್ಎಲ್ ಕಂಪನಿಯು ಕಾಂಡೋಮ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಎರಡು ವರ್ಷಗಳಿಂದ ವೆಂಟಿಲೇಟರ್ ಗಳನ್ನು ತಯಾರಿಸುತ್ತಿದೆ. ಇಂತಹ ಕಂಪನಿಯಿಂದ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಇದರಲ್ಲಿ ಯಾವುದೇ ಬೆಲೆಯನ್ನು ನಮೂದಿಸಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡರು ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕೋವಿಡ್ ನಿಯಂತ್ರಿಸುವಲ್ಲಿ ವಿವಿಧ ಇಲಾಖೆಗಳಿಗೆ ಸಮನ್ವಯದ ಕೊರತೆ ಇದೆ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.