ಮೈಸೂರು: ನಟ ಕಿಚ್ಚ ಸುದೀಪ್ ಯೂಟ್ಯೂಬ್ ಚಾನಲ್ ಮೂಲಕ ಲೈವ್‌ಗೆ ಬಂದು ನಗರದ ಡಿಸಿಪಿ ಪ್ರಕಾಶ್ ಗೌಡರಿಗೆ ಅಭಿನಂದನೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಪ್ರಕಾಶ್ ಗೌಡ, ನಿಮ್ಮ ಜೊತೆ ಮಾತನಾಡಿದ್ದು ಸಂತೋಷವಾಗಿದೆ. ನಿಮ್ಮ ಮಾತನ್ನು ಲಕ್ಷಾಂತರ ಜನ ಕೇಳುತ್ತಾರೆ. ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಜನರು ಮುಂಜಾಗ್ರತಾ ಕ್ರಮ ವಹಿಸಬೇಕು. ನೀವುಗಳೂ ಕೂಡ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು. ಜೊತೆಗೆ, ಚಲನಚಿತ್ರೋದ್ಯಮದ ಕೆಲವರಿಗೂ ಸೋಂಕು ತಗುಲುತ್ತಿದ್ದು, ಪ್ರತಿಯೊಬ್ಬರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಸುದೀಪ್ ಇದಕ್ಕೆ ಉತ್ತರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ. ಕುಟುಂಬಸ್ಥರನ್ನೆಲ್ಲಾ ಬಿಟ್ಟು ದೂರ ಉಳಿದು ಶ್ರಮ ವಹಿಸಿ ಕೊರೊನಾ ಸೋಂಕು ನಿಯಂತ್ರಣದ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ, ವೈದ್ಯರಿಗೆ ತುಂಬು ಹೃದಯದ ಧನ್ಯವಾದಗಳು ಎಂದರು.