ETV Bharat / state

ತಮಿಳುನಾಡಿಗೆ ನೀರು ಬಿಡದಂತೆ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ - kannadanews

ರಾಜ್ಯದ ಎಲ್ಲ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.

ತಮಿಳುನಾಡಿಗೆ ನೀರು ಬಿಡದಂತೆ ಒತ್ತಡ ತರುವಂತೆ ಮನವಿ
author img

By

Published : Jun 25, 2019, 10:05 PM IST

ಮೈಸೂರು: ರಾಜ್ಯದ ಎಲ್ಲ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.

ನಗರದ ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ನಡೆದ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖ ಎಂಜಿನಿಯರುಗಳು ಈ ಕುರಿತು ಚರ್ಚಿಸಿದ್ದು, ಮುಂದಿನ ಮೂರು ದಿನಗಳೊಳಗೆ ಕರಡು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಮತ್ತು ರಾಜ್ಯದ 28 ಸಂಸದರಿಗೂ ಕರಡು ಕಳುಹಿಸುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಾಯಿತು. ಕಳೆದ ತಿಂಗಳೂ ಸಭೆ ನಡೆಸಿದಾಗ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿ ಮಳೆ ಆರಂಭವಾಗದಿದ್ದರಿಂದ ಜಲಾಶಯದಲ್ಲಿನ ನೀರಿನ ಪ್ರಮಾಣ ಕುಡಿಯುವ ನೀರಿಗೆ ಬೇಕು. ಮಳೆ ಶುರುವಾದ ಮೇಲೆ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿ ಆದರೆ ನೀರು ಬಿಡುತ್ತೇವೆ ಎಂದಿತ್ತು ಎಂದರು.

ಭಾರತೀಯ ಹವಮಾನ ಇಲಾಖೆಯವರ ಅಭಿಪ್ರಾಯ ಪಡೆದು ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿಯಾದ ನಂತರ ನೀರು ಬಿಡುವಂತೆ ಸೂಚಿಸಿತ್ತು. ಕೇಂದ್ರದ ತಾಂತ್ರಿಕ ಸಮಿತಿ ಜಲಾಶಯ ಪರಿಶೀಲಿಸಿ, ವರದಿ ಸಲ್ಲಿಸಿದ್ದರಿಂದ ಇವತ್ತು ಸಭೆ ಮಾಡಿ ಮಳೆ ಬಂದಾಗ ನೀರು ಬಿಡುವಂತೆಯೂ ಹಾಗೂ ಮುಂಗಾರು ತಡವಾದ್ದರಿಂದ ಜುಲೈ ಮೊದಲ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ.

Intro:ಕಾವೇರಿ ನೀರುBody:ಮೈಸೂರು: ರಾಜ್ಯದ ಎಲ್ಲ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕಿದೆ ಎಂದು  ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಮಂಗಳವಾರ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖ ಎಂಜಿನಿಯರುಗಳ ಚರ್ಚಿಸಿ ಮುಂದಿನ ಮೂರು ದಿನಗಳೊಳಗೆ ಕರಡು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಮತ್ತು ರಾಜ್ಯದ ೨೮ ಸಂಸದರಿಗೂ ಕರಡು ಕಳುಹಿಸುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ  ಎಸಿಐಎಂಸಿ ಸಂಚಾಲಕ ಎಂ. ಲಕ್ಷ್ಮಣ್, ಕಾವೇರಿ ನಿರ್ವಹಣಾ ಮಂಡಳಿ ನಡೆಸಿದ ಸಭೆಯು ಕಳೆದ ಮೇ ೨೫ ರಂದು ೯.೧೯ ಟಿಎಂಸಿ ನೀರು ಬಿಡಲು ನಿರ್ಧರಿಸಿತ್ತು. ಕಳೆದ ತಿಂಗಳೂ ಸಭೆ ನಡೆಸಿದಾಗ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿ ಮಳೆ ಆರಂಭವಾಗದ್ದರಿಂದ ಹಾಲಿ ಜಲಾಶಯದ ಪ್ರಮಾಣ, ಕುಡಿಯುವ ನೀರಿಗೆ ಬೇಕು. ಮಳೆ ಶುರುವಾದ ಮೇಲೆ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿ ಆದರೆ ಬಿಡುತ್ತೇವೆ ಎಂದಿತ್ತು ಎಂದರು.
ಭಾರತೀಯ ಹವಮಾನ ಇಲಾಖೆಯವರ ಅಭಿಪ್ರಾಯ ಪಡೆದು ಜೂ. ೨ ರಿಂದ ಮುಂಗಾರು ಆರಂಭವಾಗುತ್ತೆ. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿಯಾಗುತ್ತೇ. ಒಳ ಹರಿವು ಹೆಚ್ಚಾದ ಮೇಲೆ ನೀರು ಬಿಡುವಂತೆ ಸೂಚಿಸಿತ್ತು. ಕೇಂದ್ರದಿಂದ ತಾಂತ್ರಿಕ ಸಮಿತಿಯನ್ನು ಜಲಾಶಯ ಪರಿಶೀಲಿಸಿ, ವರದಿ ಸಲ್ಲಿಸಿದ್ದರಿಂದ ಇವತ್ತು ಸಭೆ ಮಾಡಿ ಮಳೆ ಬಂದಾಗ ನೀರು ಬಿಡುವಂತೆಯೂ ಹಾಗೂ ಮುಂಗಾರು ತಡವಾದ್ದರಿಂದ ಜುಲೈ ಮೊದಲ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದರು.
ತಮಿಳುನಾಡಿನ ಬಿಳಿಗುಂಡ್ಲು ೧೪ ಟಿಎಂಸಿ ನೀರು ಹರಿಯಬೇಕಾಗಿತ್ತು. ಈ ಪೈಕಿ ಇಲ್ಲಿಯವರೆಗೂ ೧.೮೮೫ ಟಿಎಂಸಿ ಮಾತ್ರ. ಬಾಕಿ ನೀರನ್ನು ಬಿಡಲು ತಮಿಳುನಾಡು ವಾದ ಮಾಡಿತ್ತು. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿ, ಮುಂಗಾರು ಕೈಕೊಟ್ಟಿದ್ದರಿಂದ ಕೆಆರ್‌ಎಸ್ (೬.೫ ಟಿಎಂಸಿ), ಕಬಿನಿ (೧.೮೫ ಟಿಎಂಸಿ), ಹಾರಂಗಿ (೧.೫ ಟಿಎಂಸಿ), ಹೇಮಾವತಿ (೩.೫ ಟಿಎಂಸಿ) ಒಟ್ಟು ೧೩.೫ ಟಿಎಂಸಿ ನೀರಿನಲ್ಲಿ ೧೦ ಟಿಎಂಸಿ ನೀರು ಬಿಟ್ಟರೆ ನಮಗೆ ಆಗುವುದಿಲ್ಲ.’ ಈ ವಾದ ಆಲಿಸಿದ ಮುಂಗಾರು ಇದ್ದಾಗ ತಿಂಗಳ ಹಂಚಿಕೆಯಂತೆ ನೀರು ಬಿಡುವಂತೆ ಸೂಚಿಸಿದೆ. ಈ ಸತ್ಯವನ್ನು ಅರ್ಥ ಮಾಡಿಕೊಂಡು ರಾಜ್ಯದ ಎಲ್ಲಾ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.Conclusion:ಕಾವೇರಿ ನೀರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.