ಮೈಸೂರು: ಇವತ್ತು ಸಚಿವರಾದ ತಕ್ಷಣವೇ ಮೊದಲ ಬಾರಿಗೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನ ಕೆ.ಎಸ್ ಈಶ್ವರಪ್ಪನವರು ಪಡೆದಿದ್ದಾರೆ.
ತಮ್ಮ ಕುಟುಂಬ ಸಮೇತರಾಗಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಸಚಿವ ಈಶ್ವರಪ್ಪನವರು ನಾಡು ಸುಭಿಕ್ಷವಾಗಿರಲಿ ತಾಯಿ ಅಂತಾ ಪ್ರಾರ್ಥಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಶಾ ಅವರ ಆಶಯದಂತೆ ರಾಜ್ಯದಲ್ಲಿ ಮಂತ್ರಿಮಂಡಲ ರಚನೆಯಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯೇ ನಮ್ಮ ಗುರಿಯಾಗಲಿದೆ ಎಂದರು.
ಮಂತ್ರಿಸ್ಥಾನ ಸಿಗದೇ ಇರುವವರಿಗೆ ಅಸಮಾಧಾನ ಇರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸಮಾಧಾನಗೊಳಿಸಲಾಗುವುದು. ನನಗೆ ಯಾವ ಖಾತೆ ಸಿಕ್ಕರೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.