ETV Bharat / state

ಕೋವಿಡ್‌ನ ಎರಡೂ ಅಲೆಯಿಂದ ಕಲಿತ ಪಾಠ 3ನೇ ಅಲೆ ತಡೆಗೆ ನೆರವಾಗಲಿ: ನ್ಯಾ ಬಿ.ಎಸ್. ಪಾಟೀಲ್ - ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯಾಗುತ್ತಿದೆ. ಕಳೆದೊಂದು ವಾರದ ಹಿಂದೆ ಕಡಿಮೆಯಾಗುತ್ತಿದ್ದ ಪ್ರಕರಣಗಳು ಇದೀಗ ಮತ್ತೆ ಏರಿಕೆಯತ್ತ ಸಾಗಿವೆ. ಈ ನಡುವೆ ಮೈಸೂರಲ್ಲಿ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Justice B S Patil
ನ್ಯಾ ಬಿ.ಎಸ್.ಪಾಟೀಲ್
author img

By

Published : Jul 25, 2021, 7:59 AM IST

ಮೈಸೂರು: ಕೋವಿಡ್‌ನ ಮೊದಲೆರಡು ಅಲೆಯಿಂದ ಅಧಿಕಾರಿಗಳು ಹಲವು ಪಾಠ ಕಲಿತಿದ್ದಾರೆ. 3ನೇ ಅಲೆ ಬಗ್ಗೆ ಪರಿಣಿತರು ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳದಿದ್ದರೆ ಮತ್ತೆ ಅಂತಹದ್ದೇ ಸ್ಥಿತಿ ಬರಬಹುದು. ಅದು ಮರುಕಳಿಸಬಾರದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್-19ರ 3ನೇ ಅಲೆ ಎದುರಿಸಲು ಮೈಸೂರು ಜಿಲ್ಲಾಡಳಿತ ಮಾಡಿಕೊಂಡಿರುವ ಪೂರ್ವಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಕೋವಿಡ್ ಆರಂಭದಲ್ಲಿ ಜನರು ಎಲ್ಲಾ ಮುಂಜಾಗೃತ ಕ್ರಮಗಳನ್ನು ಪಾಲಿಸಿದರು. ಆದರೆ ಮೊದಲ ಅಲೆ ಕಡಿಮೆಯಾಗುತ್ತಿದ್ದಂತೆ ನಿರ್ಲಕ್ಷ್ಯವಹಿಸಿದರು. ಹೆಚ್​​ಡಿ ಕೋಟೆ ತಾಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಮನಿಸಿದ್ದೇನೆ. ಜನರು ಮಾಸ್ಕ್ ಹಾಕುವುದನ್ನೇ ಆಗ ಬಿಟ್ಟಿದ್ದರು. 2ನೇ ಅಲೆ ತೀವ್ರಗೊಳ್ಳುವವರೆಗೂ ಎಚ್ಚರತಪ್ಪಿದರು. ಇದರಿಂದ ಹೆಚ್ಚಿನ ಹಾನಿಯಾಗಿದೆ ಎಂದರು.

3ನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದು ಹೇಳಲಾಗುತ್ತಿದೆ. ಪೋಷಕರ ಮೂಲಕವೇ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ, ಮಕ್ಕಳನ್ನು ರಕ್ಷಿಸಿಕೊಳ್ಳಲು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ, ತಿಳುವಳಿಕೆ ನೀಡಬೇಕಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮುಂತಾದವರನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್​​​ಫೋರ್ಸ್‌ಗೆ ಸೂಕ್ತ ತರಬೇತಿ ನೀಡಿ, ಆ ಮೂಲಕ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಬಹಳ ಮುಖ್ಯ. ಎಲ್ಲಾ ವೈದ್ಯಕೀಯ ಸೌಲಭ್ಯಗಳು ಜಿಲ್ಲಾ ಕೇಂದ್ರದಲ್ಲಿ ಇದ್ದರೆ ಸಾಲದು. ತಾಲೂಕು ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯ ಸಿಗುವಂತೆ ತಯಾರಾಗಬೇಕು ಎಂದು ಸಲಹೆ ನೀಡಿದರು.

ಶೇ.50ರಷ್ಟು ಮಂದಿಗೆ ಲಸಿಕೆ

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಪೂರ್ವಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವಿವರಿಸಿ, ಹಿಂದಿನ ಅನುಭವಗಳ ಮೇಲೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು. ಕೋವಿಡ್ ತೀವ್ರಗೊಂಡಿದ್ದ ಸಂದರ್ಭದಲ್ಲಿ ಕೆಲ ದಿನಗಳ ಕಾಲ ದಿನ 3 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಅಂತಹದ್ದೇ ಪರಿಸ್ಥಿತಿ ಮುಂದೆ ಪ್ರತಿ ದಿನ 3 ಸಾವಿರ, 4 ಸಾವಿರ ಅಥವಾ 5 ಸಾವಿರ ಪ್ರಕರಣಗಳು ಬಂದರೂ ಬೇಕಾಗುವಷ್ಟು ವೈದ್ಯಕೀಯ ಸೌಲಭ್ಯ ಹೊಂದಿಸಿಕೊಂಡಿದ್ದೇವೆ ಎಂದರು.

ಬೆಂಗಳೂರು ಹೊರತುಪಡಿಸಿದರೆ ಮೈಸೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಟೆಸ್ಟ್ ಮಾಡಲಾಗಿದೆ. ಈವರೆಗೆ ಸುಮಾರು 17 ಲಕ್ಷ ಜನರಿಗೆ ಲಸಿಕೆ ನೀಡಿದ್ದು, ಜಿಲ್ಲೆಯ ಶೇ.50ರಷ್ಟು ಜನರಿಗೆ ಲಸಿಕೆ ಹಾಕಿದಂತಾಗಿದೆ ಎಂದು ಮಾಹಿತಿ ನೀಡಿದರು.

ಓದಿ: ಲಾಕ್‌ಡೌನ್​ನಿಂದ ಆರ್ಥಿಕ ಹೊರೆ.. ಹೇಗಿದೆ ಇಲಾಖಾವಾರು ಪ್ರಗತಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.