ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಜೆಡಿಎಸ್-ಕಾಂಗ್ರೆಸ್ ದಿಗ್ಗಜರ ಜಂಟಿ ಸುದ್ದಿಗೋಷ್ಟಿ ನಡೆಸುವ ಮುನ್ನವೇ ಜೆಡಿಎಸ್ ಕಾರ್ಯಕರ್ತನೋರ್ವ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಶಾಸಕ ತನ್ವೀರ್ ಸೇಠ್ ಸ್ವಾಗತ ಕೋರುವಾಗ ಸ್ಥಳಕ್ಕಾಗಮಿಸಿದ ಜೆಡಿಎಸ್ ಕಾರ್ಯಕರ್ತನೋರ್ವ, ಮುಖಂಡರು ಮಾತ್ರ ಚರ್ಚೆ ನಡೆಸಬೇಕೆ, ನಮಗೂ ಅವಕಾಶ ಕೊಡಿ ಎಂದು ಕೂಗಾಡಿದ್ದಾರೆ. ಇದು ಉಭಯ ಪಕ್ಷಗಳ ಮುಖಂಡರಿಗೆ ಮುಜುಗರ ಉಂಟುಮಾಡಿದೆ.
ಈ ವೇಳೆ ಸಚಿವ ಜಿ.ಟಿ. ದೇವೇಗೌಡ ರೇಗಿದಾಗ, ತನ್ವೀರ್ ಸೇಠ್ ಅವರು ಕಾರ್ಯಕರ್ತನನ್ನು ಸಮಾಧಾನಪಡಿಸಿದ್ದಾರೆ.