ETV Bharat / state

ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ: ಅ.10ಕ್ಕೆ ಸಂಸ್ಕರಣ ಗ್ರಂಥಮಾಲೆ ಬಿಡುಗಡೆ

author img

By

Published : Oct 6, 2019, 9:53 AM IST

ಅ.10 ರಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಅವರು ಬರೆದಿರುದ ‘ಶ್ರೀ ವಿದ್ಯಾ ಕೀರ್ತನ ಸುಧಾಲಹರಿ’ ಸಂಸ್ಕರಣ ಗ್ರಂಥಮಾಲೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಪ್ರಮೋದಾದೇವಿ ಒಡೆಯರ್

ಮೈಸೂರು : ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾಮೋತ್ಸವ ಹಿನ್ನೆಲೆಯಲ್ಲಿ ಅ.10 ರಂದು ‘ಶ್ರೀ ವಿದ್ಯಾಕೀರ್ತನ ಸುಧಾಲಹರಿ’ ಸಂಸ್ಕರಣ ಗ್ರಂಥಮಾಲೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

ನಗರದ ಅಂಬಾವಿಲಾಸ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾಮೋತ್ಸವ ಹಿನ್ನಲೆಯಲ್ಲಿ ಅವರು ಬರೆದಿರುವ ಕೀರ್ತನೆಗಳ ಬಿಡುಗಡೆ ಕಾರ್ಯಕ್ರಮವನ್ನು ಅ.10 ರಂದು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ‘ಶ್ರೀ ವಿದ್ಯಾಕೀರ್ತನ ಸುಧಾಲಹರಿ’ ಸಂಸ್ಕರಣ ಗ್ರಂಥಮಾಲೆಯನ್ನು ಅರಮನೆಯ ದರ್ಬಾರ್ ಹಾಲ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ದೇವನಾಗರಿ ಭಾಷೆಯಲ್ಲಿ ಹೊರತರಲಾಗಿರುವ ಪುಸ್ತಕ ಇದಾಗಿದೆ ಎಂದು ವಿವರಿಸಿದ್ರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 22 ಎಕರೆ ಭೂಮಿಯನ್ನು ಜೆಎಸ್ಎಸ್ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಅ.10 ರಂದು ಅದೇ ಜಾಗದಲ್ಲಿ ಜೆಎಸ್ಎಸ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಅ.12 ರಂದು ಗಾಯಕ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಮನೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.

ಜಂಬೂಸವಾರಿಯಂದು ಅಂಬಾರಿಗೆ ಪುಷ್ಪಾರ್ಚನೆ:
ಅ.8ರ ಜಂಬೂಸವಾರಿ ದಿನದಂದು ಯದುವೀರ್ ಪಾಲ್ಗೊಳ್ಳುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಜಂಬೂಸವಾರಿ ದಿನದಂದು ಯದುವೀರ್ ಭಾಗವಹಿಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದಾರೆ. ಹಾಗಾಗಿ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಯದುವೀರ್ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Intro:ರಾಜಮಾತೆBody:ಮೈಸೂರು: ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾಮೋತ್ಸವ ಹಿನ್ನಲೆ, ಅ. ೧೦ ರಂದು ‘ಶ್ರೀ ವಿಧ್ಯಾಕೀರ್ತನ ಸುಧಾಲಹರಿ’ ಸಂಸ್ಕರಣ ಗ್ರಂಥಮಾಲೆಯನ್ನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದದೇವಿ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಬರೆದಿರುವ ಕೀರ್ತನೆಗಳ ಶ್ರೀ ವಿಧ್ಯಾಕೀರ್ತನ ಸುಧಾಲಹರಿ” ಸಂಸ್ಕರಣ ಮೈಸೂರು ಅರಮನೆಯ ದರ್ಬಾರ್ ಹಾಲ್ ನಲ್ಲಿ ರಾತ್ರಿ ೭.೩೦ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಂಯೋಜಿಸಿರುವ ಜಯಸಂವರ್ಧಿನಿ ರಾಗದಲ್ಲಿ ಕೀರ್ತನೆ ಹಾಡಿಸಲಾಗುವುದು. ಕನ್ನಡ ಮತ್ತು ದೇವನಾಗರಿ ಭಾಷೆಯಲ್ಲಿ ಭಾಷೆಯಲ್ಲಿ ಹೊರತರಲಾಗಿರುವ ಪುಸ್ತಕ ಇದಾಗಿದೆ ಎಂದು ವಿವರಣೆ ನೀಡಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ೨೨ ಎಕರೆ ಭೂಮಿಯನ್ನು ಜೆ.ಎಸ್.ಎಸ್ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಅಕ್ಟೋಬರ್  ೧೦ ರಂದು ಅದೇ ಜಾಗದಲ್ಲಿ  ಜೆ.ಎಸ್.ಎಸ್ ವಿಶ್ವವಿದ್ಯಾನಿಲಯದ ಕ್ಯಾಂಪಸ್  ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು.
ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾಮೋತ್ಸವ ಹಿನ್ನೆಲೆ, ಅ.೧೩ ರಂದು ಗಾಯಕ ರಘುದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಮನೆ ಆವರಣದಲ್ಲಿ ಕಾರ್ಯಕ್ರಮ  ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ಜಂಬೂಸವಾರಿಯಂದು ಅಂಬಾರಿಗೆ ಪುಷ್ಪಾರ್ಚನೆ:
ಅ.8ರ ಜಂಬೂಸವಾರಿ ದಿನದಂದು ಯದುವೀರ್  ಅವರು ಪಾಲ್ಗೊಳ್ಳುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಮೋದಾ ದೇವಿ ಒಡೆಯರ್, ಜಂಬೂಸವಾರಿ ದಿನದಂದು ಯದುವೀರ್ ಭಾಗವಹಿಸಲಿದ್ದಾರೆ. ಈಗಾಗಲೇ ಮುಖ್ಯಮತ್ರಿಗಳು ಆಹ್ವಾನ ನೀಡಿದ್ದಾರೆ. ಹಾಗಾಗಿ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಯದುವೀರ್ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.Conclusion:ರಾಜಮಾತೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.