ಮೈಸೂರು: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಉತ್ಸವ ಮೂರ್ತಿಯು ಚಾಮುಂಡಿ ಬೆಟ್ಟ ತಲುಪಿದೆ.
ಪಂಚ ಲೋಹದಿಂದ ನಿರ್ಮಾಣಗೊಂಡಿರುವ ನಾಡದೇವಿ ಉತ್ಸವ ಮೂರ್ತಿಯು ಅಂಬಾ ವಿಲಾಸ ಅರಮನೆಯಿಂದ ಚಾಮುಂಡಿ ಬೆಟ್ಟದ ಆಡಳಿತಾಧಿಕಾರಿ ಸಮ್ಮುಖದಲ್ಲಿ ಉತ್ಸವ ಮೂರ್ತಿಯನ್ನ ಕಳುಹಿಸಲಾಯಿತು.
ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ದಿನಗಳಂದು ವಿಶೇಷ ಪೂಜೆ ಮಾಡಲಾಗುವುದು. ಅದಕ್ಕೂ ಮುನ್ನ ಪ್ರತಿಮೆಯನ್ನ ಶುಚಿಗೊಳಿಸಿ ಪೂಜೆಗೆ ಸಿಬ್ಬಂದಿ ಸಿದ್ಧತೆಗೊಳಿಸುತ್ತಾರೆ.
ಜಂಬೂ ಸವಾರಿ ದಿನ ಮತ್ತೆ ಅರಮನೆಗೆ ಹಿಂದಿರುಗಲಿರುವ ನಾಡದೇವಿ ಉತ್ಸವ ಮೂರ್ತಿಯನ್ನು ಜಂಬೂ ಸವಾರಿ ವೇಳೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು.