ETV Bharat / state

ಆಂಧ್ರ ಮೂಲದ ಅಂತಾರಾಜ್ಯ ಕಾರುಗಳ್ಳನ ಬಂಧನ.. ಮೂರು ಕಾರು ಸೇರಿದಂತೆ ಚಿನ್ನಾಭರಣ ವಶ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಅಂತಾರಾಜ್ಯ ಕಾರುಗಳ್ಳನ 56 ಕೇಸ್​ಗಳಲ್ಲಿ ಭಾಗಿಯಾಗಿದ್ದು, ಇನ್ನಷ್ಟು ತನಿಖೆಗೆ ಒಳಪಡಿಸಿದ್ದೇವೆ ಎಂದು ನಗರ ಪೊಲೀಸ್​ ಕಮಿಷನರ್ ರಮೇಶ್ ಬಾನೋತ್ ಹೇಳಿದರು.

ಅಂತರರಾಜ್ಯ ಕಾರುಕಳ್ಳನ ಬಂಧನ
ಅಂತರರಾಜ್ಯ ಕಾರುಕಳ್ಳನ ಬಂಧನ
author img

By

Published : Aug 2, 2023, 4:03 PM IST

ನಗರ ಪೊಲೀಸ್​ ಕಮಿಷನರ್ ರಮೇಶ್ ಬಾನೋತ್ ಹೇಳಿಕೆ

ಮೈಸೂರು : ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ, ಆಂಧ್ರ ಮೂಲದ ಅಂತಾರಾಜ್ಯ ಕಾರು ಕಳ್ಳನನ್ನು ಕಳೆದ ಎರಡು ದಿನಗಳ ಹಿಂದೆ ನಗರದ ಪೊಲೀಸರು ಬಂಧಿಸಿದ್ದರು. ಈತನಿಂದ ಮೂರು ಐಷಾರಾಮಿ ಕಾರುಗಳು, ಮೂರು ದುಬಾರಿ ಬೆಲೆಯ ವಾಚ್​ಗಳು ಹಾಗೂ 750 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಎಂದು ಪೊಲೀಸ್​ ಕಮಿಷನರ್ ರಮೇಶ್ ಬಾನೋತ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, 35ವರ್ಷದ ಆರೋಪಿ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆ 56 ಕೇಸ್​ಗಳಲ್ಲಿ ಭಾಗಿಯಾಗಿದ್ದಾನೆ. 1,19,61,706 ರೂ. ಬೆಲೆಯ ಮೂರು ಕಾರುಗಳು, ಮೂರು ದುಬಾರಿ ಬೆಲೆಯ ವಾಚ್ ಹಾಗೂ 750 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದದ್ದಾರೆ. ಈತ ಆಂಧ್ರ ಮೂಲದವನೆಂದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿರುವುದರಿಂದ ಆತನ ಹೆಸರು ಹಾಗೂ ಇತರ ವಿವರಗಳನ್ನು ನೀಡಲು ಕಮಿಷನರ್ ನಿರಾಕರಿಸಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಚಿನ್ನಾಭರಣ ವಶ
ಚಿನ್ನಾಭರಣ ವಶ

ಕಣ್ಣಿಗೆ ಖಾರದಪುಡಿ ಎರಚಿ ಹಣ ದರೋಡೆ; ಐವರ ಬಂಧನ : ಹೆಬ್ಬಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಜುಲೈ 26ರಂದು ಹೆಬ್ಬಾಳದ ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಖಾರದಪುಡಿ ಎರಚಿ 6ಲಕ್ಷ ರೂ. ಹಣ ದರೋಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚನೆ ಮಾಡಿದ್ದು, ಸೋಮವಾರ 5 ಜನ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ. ಇವರಿಂದ 4.35 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಸೈಕಲ್ ಹಾಗೂ ಸ್ಕೂಟರ್ ಅನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಮಿಷನರ್ ಹೇಳಿದರು.

ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ : ವಿಜಯನಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ ಒಂದು ಗೂಡ್ಸ್ ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಜೊತೆಗೆ ನರಸಿಂಹರಾಜ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ಸರಗಳ್ಳನನ್ನು ಬಂಧಿಸಿ, 50 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ರಮೇಶ್ ಬಾನೋತ್ ಈ ನಾಲ್ಕು ಪ್ರಕರಣಗಳ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ವಿವರಿಸಿದರು.

ಕಾರುಗಳ್ಳನನ್ನು ಸೆರೆ ಹಿಡಿದಿದ್ದು ಹೇಗೆ? : ಕಳ್ಳತನವಾದ ಕಾರಿನಲ್ಲಿ ಜಿಪಿಎಸ್ ತಂತ್ರಜ್ಞಾನ ಇದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಜಿಪಿಎಸ್ ತಂತ್ರಜ್ಞಾನದ ನೆರವು ಪಡೆದು, ಕಾರ್ಯಾಚರಣೆ ಚುರುಕುಗೊಳಿಸಿ ಐಟಿ ವಿಭಾಗದ ಮೂಲಕ ಟ್ರಾಕಿಂಗ್ ಮಾಡಿ ಅಪರಾಧಿಯ ಬೆನ್ನತ್ತಿದ್ದರು. ಕಾರಿನಲ್ಲಿ ಜಿಪಿಎಸ್ ಇರುವ ಬಗ್ಗೆ ಕಳ್ಳನಿಗೆ ಮಾಹಿತಿ ಇರಲಿಲ್ಲ. ಖಚಿತ ಮಾಹಿತಿಯನ್ನು ಪಡೆದ ಪೊಲೀಸ್​ ತಂಡವು ಬೆಂಗಳೂರಿನ ಒಂದು ಸ್ಥಳದಲ್ಲಿ ಕಾರನ್ನು ಸುತ್ತುವರೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ : ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಕಳ್ಳತನ ಮಾಡುತ್ತಿದ್ದ ಖದೀಮನ ಸೆರೆ.. ಪೊಲೀಸರಿಗೆ ಸುಳಿವು ನೀಡಿದ ಜಿಪಿಎಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.